
ಕಾಮುಕ ಟೆಕ್ಕಿ ಮೊಬೈಲ್‌ನಲ್ಲಿ ತನ್ನ ಪ್ರಿಯತಮೆಯದ್ದೂ ಸೇರಿ 208 ಖಾಸಗಿ ವೀಡಿಯೊಗಳು ಪತ್ತೆ..!
ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿಯರ ಪರಿಚಯ ಮಾಡಿಕೊಂಡು ವಂಚನೆ ಮಾಡಿರೋ ಪ್ರಕರಣದ ತನಿಖೆ (Investigation) ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿವೆ.
ಆರೋಪಿ ಕನ್ನಪಲ್ಲಿ ದಿಲ್ಲಿ ಪ್ರಸಾದ್‌ನ ನಿಜ ಬಣ್ಣ ಬಯಲಾಗಿದ್ದು, ಆರೋಪಿ ಮೊಬೈಲ್‌ನಲ್ಲಿ (Mobile) ಯುವತಿಯರ 208 ಖಾಸಗಿ ವೀಡಿಯೋಗಳು (Private Video) ಪತ್ತೆಯಾಗಿವೆ. ಅದರಲ್ಲಿ ಪ್ರಸಾದ್ ತಾನೇ ವೀಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದಾನೆ ಎನ್ನಲಾದ 60 ವೀಡಿಯೋಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ (Instagram) ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಆಸಾಮಿ ನಂತರ ತನ್ನ ಅವಶ್ಯಕತೆಗಳನ್ನು ಪೂರೈಸುವಂತೆ ಬ್ಲಾಕ್‌ಮೇಲ್ ಮಾಡ್ತಿದ್ದ. ತನ್ನ ಪ್ರಿಯತಮೆ ಹಾಗೂ 6 ಯುವತಿಯರನ್ನ ಲೈಂಗಿಕ ಕ್ರಿಯೆಗಾಗಿ ಬಳಸಿಕೊಂಡಿದ್ದಾನೆ. ಲೈಂಗಿಕವಾಗಿ ಬಳಸಿಕೊಂಡ ನಂತರ ಯುವತಿಯರನ್ನ ಅವಾಯ್ಡ್ ಮಾಡಲು ಮುಂದಾಗಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ಹೆಸರಲ್ಲಿ ಅಕೌಂಟ್ ತೆರೆದು ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಟೆಕ್ಕಿ ಪ್ರಸಾದ್, ತಾನು ಕೆಲಸ ಗಿಟ್ಟಿಸಲು ಮೈ ಮಾರಿಕೊಂಡಿದ್ದೇನೆ ಎಂದು ಹೇಳಿ ನಂಬಿಸ್ತಿದ್ದ. ಯುವತಿಯರ ರೀತಿ ಚಾಟ್ ಮಾಡಿ ನಗ್ನ ವೀಡಿಯೋ ಕಳಿಸಿಕೊಂಡು ಲೈಂಗಿಕ ಕ್ರಿಯೆಗೆ ಆಹ್ವಾನ ನೀಡ್ತಿದ್ದ. ಓಯೋ ರೂಂ ಗೆ ಕರೆಸಿ ಬಲವಂತವಾಗಿ ಅತ್ಯಾಚಾರ ಮಾಡಿರೋದು ಸೌತ್ ಈಸ್ಟ್ ಸೆನ್ ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ.