
Crime
ಒಂಟೆಗೆ ಕಾರು ಡಿಕ್ಕಿ – ಮಂಗಳೂರಿನ ಮೂವರು ಸೇರಿ ನಾಲ್ವರು ಸೌದಿಯಲ್ಲಿ ದುರ್ಮರಣ
ಸೌದಿ ಅರೇಬಿಯಾದಲ್ಲಿ (Saudi Arabia) ನಿನ್ನೆ (ಶುಕ್ರವಾರ) ತಡರಾತ್ರಿ ನಡೆದ ಭೀಕರ ಕಾರು ಅಪಘಾತದಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಈ ಅಪಘಾತ (Accident) ಸಂಭವಿಸಿದೆ. ಅಖಿಲ್, ನಾಸಿರ್, ರಿಝ್ವಾನ್, ಶಿಹಾಬ್ ಮೃತಪಟ್ಟವರು ದುರ್ದೈವಿಗಳು. ಇದರಲ್ಲಿ ಮೂವರು ಮಂಗಳೂರಿನವರಾಗಿದ್ದು (Mangaluru), ಓರ್ವ ಬಾಂಗ್ಲಾ ದೇಶದವರು (Bangladesh).
ನಾಲ್ವರು ಕಾರಿನಲ್ಲಿ (Car) ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ಒಂಟೆಗೆ ಡಿಕ್ಕಿಯಾಗಿ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದವರು ಸಾಕ್ಯುಕೋ ಎಂಬ ಕಂಪನಿಯಲ್ಲಿ ನೌಕರರಾಗಿದ್ದರು. ಮೃತದೇಹಗಳನ್ನು ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.