
ಹಾಗಲಕಾಯಿ ಎಂದರೇ ಇಷ್ಟ ಪಡುವುದಕ್ಕಿಂತ ಮೂಗು ಮುರಿಯುವವರೆ ಹೆಚ್ಚು. ಹಾಗಲಕಾಯಿ ಪಲ್ಯ, ಸಾರು, ಕರಿ ಎಷ್ಟೇ ಇದ್ದರೂ ಈ ತರಕಾರಿ ತಿನ್ನುವವರೂ ತುಂಬಾ ವಿರಳ. ಆದರೆ ಈ ತರಕಾರಿಯಿಂದ ಎಷ್ಟು ಲಾಭವಿದೆ ಎಂದು ತಿಳಿದವರಿಗೆ ಮಾತ್ರ ಇದರ ಮಹತ್ವ ಗೊತ್ತು. ಹಾಗಲಕಾಯಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ಮಧುಮೇಹ, ಅನಗತ್ಯ ಕೊಬ್ಬುಗಳನ್ನು ಶ್ರೀಘ್ರವೇ ಶಮನ ಮಾಡಲು ತುಂಬಾ ಸಹಾಯ ಮಾಡುತ್ತೆ. ಅದಕ್ಕೆ ಇಂದು ನಾವು ಹೇಳಿಕೊಡುತ್ತಿರುವ ‘ಹಾಗಲಕಾಯಿ ಡ್ರೈ ಪಲ್ಯ’ ಮಾಡಿ ಸವಿಯಿರಿ.
ಬೇಕಾಗಿರುವ ಪದಾರ್ಥಗಳು:
* ಹಾಗಲಕಾಯಿ – 2 ಕಪ್
* ಎಣ್ಣೆ – ಅರ್ಧ ಟೀ ಸ್ಪೂನ್
* ಜೀರಿಗೆ – ಅರ್ಧ ಟೀ ಸ್ಪೂನ್
* ಕರಿಬೇವು – 3 ರಿಂದ 4
* ಕತ್ತರಿಸಿದ ಈರುಳ್ಳಿ – 1 ಕಪ್
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
* ಚಿಲ್ಲಿ ಪೌಡರ್ – 2 ಟೀ ಸ್ಪೂನ್
* ಅರಿಶಿನ – ಅರ್ಧ ಟೀ ಸ್ಪೂನ್
* ದನಿಯಾ ಪುಡಿ – ಅರ್ಧ ಟೀ ಸ್ಪೂನ್
* ಗರಂ ಮಸಾಲಾ – ಅರ್ಧ ಟೀ ಸ್ಪೂನ್
* ಉಪ್ಪು – ಅರ್ಧ ಟೀಸ್ಪೂನ್
* ಹುಣಿಸೇಹಣ್ಣು ಸಾರ – ಅರ್ಧ ಕಪ್
* ಬೆಲ್ಲ – 1 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
ಮಾಡುವ ವಿಧಾನ:
* ಮೊದಲಿಗೆ, ಹಾಗಲಕಾಯಿಯನ್ನು ದಪ್ಪಕ್ಕೆ ಸ್ಲೈಸ್ ಮಾಡಿ ಬೀಜಗಳನ್ನು ತೆಗೆದುಹಾಕಿ.
* ಉಪ್ಪು ಸೇರಿಸಿ, ಹಾಗಲಕಾಯಿಯನ್ನು ಉರಿದು ನೀರು ಸೇರಿಸಿ ಮತ್ತು 20-30 ನಿಮಿಷ ನೆನೆಯಲು ಬಿಡಿ.
* ದೊಡ್ಡ ಕಡೈಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.
* ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಚಿಲ್ಲಿ ಪೌಡರ್ ಸೇರಿಸಿ. ಈರುಳ್ಳಿ ಚೆನ್ನಾಗಿ ಬೇಯಿಸಿ.
* ಹಾಗಲಕಾಯಿಯನ್ನು ಕಡೈಗೆ ಸೇರಿಸಿ ಒಂದು ನಿಮಿಷದವರೆಗೆ ಫ್ರೈ ಮಾಡಿ. ಅದಕ್ಕೆ ಅರಶಿನ, ದನಿಯಾ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ.
* ಕಡಿಮೆ ಉರಿಯಲ್ಲಿ ಮಸಾಲೆಗಳನ್ನು ಚೆನ್ನಾಗಿ ಬೇಯಿಸಿ.
* ಹುಣಿಸೇಹಣ್ಣು ರಸ, ಬೆಲ್ಲವನ್ನು ಸೇರಿಸಿ. 20 ನಿಮಿಷಗಳ ಕಾಲ ಹಾಗಲಕಾಯಿಯನ್ನು ಡ್ರೈಯಾಗುವವರೆಗೂ ಫ್ರೈ ಮಾಡಿ.
– ಅಂತಿಮವಾಗಿ, ಕೊತ್ತಂಬರಿ ಸೊಪ್ಪು ಸೇರಿಸಿ, ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ʼಹಾಗಲಕಾಯಿ ಡ್ರೈ ಪಲ್ಯʼ ಆನಂದಿಸಿ.