
ದೆಹಲಿಯಲ್ಲಿ ಉಳಿದುಕೊಂಡೇ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಸ್ಕೆಚ್!
ದೆಹಲಿಯಲ್ಲಿ ಉಳಿದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ರಮೇಶ್ ಜಾರಕಿಹೊಳಿ (Ramesh Jarakiholi) ಸ್ಕೆಚ್ ಹಾಕಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ಕಾನೂನು ತಜ್ಞರು, ಆಪ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಇಂದು ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತೆರಳಲಿದ್ದು, ದೆಹಲಿಯಲ್ಲಿ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ಸಾಧ್ಯತೆ ನಡೆಸುವ ಸಾಧ್ಯತೆ ಇದೆ. ಸಾಧ್ಯವಾದರೆ ಸಿಎಂ ಜೊತೆಯೇ ಸಂಜೆ ಬೆಂಗಳೂರಿಗೆ ಆಗಮಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿಗೆ ಬುಧವಾರ ಅಥವಾ ಗುರುವಾರ ತಮ್ಮ ಬಳಿ ಮಾತನಾಡುವೆ ಎಂದಿದ್ದಾರಂತೆ. ಹೀಗಾಗಿ ಮಂಗಳವಾರ ಗೋಕಾಕ್‍ಗೆ ವಾಪಸ್ ಆಗಿ ಮರಳಿ ಬುಧವಾರ ಮತ್ತೆ ಬೆಳಗ್ಗೆ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ.
ಮಂಗಳವಾರ ಮನೆದೇವರು ಲಕ್ಷ್ಮಿದೇವಿ ದರ್ಶನ ಪಡೆದು, ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿ ಮಂಗಳವಾರ ಕೊಲ್ಹಾಪುರ ಲಕ್ಷ್ಮಿದೇವಿ ದರ್ಶನ ಪಡೆದು ಮುಂಬೈಗೆ ಪ್ರಯಾಣ ಮಾಡಲಿದ್ದು, ಮಂಗಳವಾರ ಮುಂಬೈನಲ್ಲಿ ದೇವೇಂದ್ರ ಫಡ್ನವಿಸ್ (Devendra Fadnavis) ಭೇಟಿಯಾಗಿ ದೆಹಲಿಗೆ ಪ್ರಯಾಣ ಸಾಧ್ಯತೆ ಇದೆ ಎಂದು ರಮೇಶ್ ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿವೆ.