
ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್‍ಗಾಗಿ ಭಾರೀ ಕಸರತ್ತು
ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ (Janardhan Poojary) ಪ್ರಭಾವ ಬಳಸಿ ಈ ಬಾರಿಯ ಚುನಾವಣಾ ಟಿಕೆಟ್‍ಗಾಗಿ ಭಾರೀ ಕಸರತ್ತು ನಡೆಯುತ್ತಿದೆ.
ಹೌದು. ಹಿರಿಯ ಕಾಂಗ್ರೆಸ್ ನಾಯಕನ ಮೂಲಕ ಟಿಕೆಟ್ ಪಡೆಯಲು ಒತ್ತಡ ತಂತ್ರ ಹೆಣೆಯಲಾಗುತ್ತಿದೆ. ಜನಾರ್ದನ ಪೂಜಾರಿಯಿಂದ ಡಿ.ಕೆ ಶಿವಕುಮಾರ್ (DK Shivakumar) ಗೆ ಕರೆ ಮಾಡಿಸಿ ಟಿಕೆಟ್ ಕೊಡಿಸಲು ಮನವಿ ಮಾಡಿದ ಪ್ರಸಂಗ ನಡೆದಿದೆ.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶೀತ್ ಪಿರೇರಾ ಟಿಕೆಟ್ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ಜನಾರ್ದನ ಪೂಜಾರಿ ಮನೆಗೆ ತೆರಳಿ ಟಿಕೆಟ್ ತೆಗೆಸಿ ಕೊಡಲು ಪ್ಲಾನ್ ಮಾಡಿದ್ದಾರೆ. ಅಂತೆಯೇ ಜನಾರ್ದನ ಪೂಜಾರಿ ಅವರು, ಡಿಕೆಶಿಗೆ ಕರೆ ಮಾಡಿ ಆಶೀತ್ ಗೆ ಟಿಕೆಟ್ ಕೊಡುವಂತೆ ಹೇಳಿದ್ದಾರೆ. ಜೆ.ಆರ್.ಲೋಬೋ ಬದಲು ಆಶೀತ್ ಪಿರೇರಾಗೆ ಟಿಕೆಟ್ ಕೊಡಲು ಹೇಳಿದ್ದಾರೆ.
ನನ್ನಲ್ಲಿಗೆ ಯೂತ್ ಕಾಂಗ್ರೆಸ್ ಲೀಡರ್ ಆಶೀತ್ ಪಿರೇರಾ ಬಂದಿದ್ದಾರೆ. ಅವರಿಗೆ ಮಂಗಳೂರು ದಕ್ಷಿಣಕ್ಕೆ ಏನಾದ್ರೂ ಸಹಾಯ ಮಾಡಲು ಸಾಧ್ಯ ಉಂಟಾ..?. ನೀವೇ ಸುಧಾರಿಸಿ, ಜೆ.ಆರ್.ಲೋಬೋ ಸ್ಥಾನಕ್ಕೆ, ಆಶೀತ್ ಪಿರೇರಾ ಕೂಡ ಕ್ರಿಶ್ಚಿಯನ್. ಡಿಕೆಶಿಗೆ ಕರೆ ಮಾಡಿ ಆಶೀತ್ ಪಿರೇರಾ ಪರ ಪೂಜಾರಿ ಮಾತನಾಡಿದ್ದಾರೆ.
ಸದ್ಯ ಮಂಗಳೂರು ದಕ್ಷಿಣದಿಂದ ಮಾಜಿ ಶಾಸಕ ಜೆ.ಆರ್ ಲೋಬೋ (J R Lobo) ಮತ್ತು ಐವನ್ ಡಿಸೋಜಾ (Ivan D’Souza) ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.