World

ಸ್ವಿಮ್ಮಿಂಗ್‌ಗೆ ತೆರಳಿದ್ದ 16ರ ಬಾಲಕಿ ಶಾರ್ಕ್ ದಾಳಿಗೆ ಬಲಿ

ಇಲ್ಲಿನ ಪಶ್ಚಿಮ ಆಸ್ಟ್ರೇಲಿಯಾದ (Australia) ರಾಜಧಾನಿ ಪರ್ತ್‌ ನದಿಯಲ್ಲಿ ಸ್ವಿಮ್ಮಿಂಗ್ (Swimming) ಮಾಡಲು ತೆರಳಿದ್ದ 16 ವರ್ಷದ ಬಾಲಕಿ ಶಾರ್ಕ್ (ಮೀನು) (Fatal Shark) ದಾಳಿಯಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ತ್ನ ಫ್ರೀಮೆಂಟಲ್ ಬಂದರು ಪ್ರದೇಶದಲ್ಲಿ ಸ್ವಾನ್ ನದಿಯ ಸಂಚಾರ ಸೇತುವೆಯ ಬಳಿ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ನೀರಿನಿಂದ ಹೊರ ತೆಗೆಯಲಾಯಿತು. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಳು.

16ರ ಬಾಲಕಿ ನದಿಯಲ್ಲಿ ಜೆಟ್ ಸ್ಕೀ (ಜಲವಾಹನ) (Jet Ski) ಮೂಲಕ ಡಾಲ್ಫಿನ್‌ನೊಂದಿಗೆ ಈಜಲು ತೆರಳಿದ್ದಳು. ಈ ವೇಳೆ ಶಾರ್ಕ್ ದಾಳಿಗೆ ತುತ್ತಾಗಿದ್ದಾಳೆ. ಆದ್ರೆ ಶಾರ್ಕ್ ಯಾವ ರೀತಿ ದಾಳಿ ಮಾಡಿದೆ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2021ರಲ್ಲಿಯೂ ಪರ್ತ್‌ನ ಪೋರ್ಟ್ ಬೀಚ್‌ನಲ್ಲಿ 57 ವರ್ಷದ ವ್ಯಕ್ತಿಯನ್ನು ಶಾರ್ಕ್ ಕೊಂದಿತ್ತು. ಆ ನಂತರ ಸ್ವಾನ್ ನದಿಯಲ್ಲಿ ಈಜುತ್ತಿದ್ದಾಗ ಬುಲ್ ಶಾರ್ಕ್‌ನಿಂದ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಪಶ್ಚಿಮ ಆಸ್ಟ್ರೇಲಿಯಾದ ನದಿಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಜಾತಿಯ ಶಾರ್ಕ್ ಗಳಿವೆ. ಅನೇಕ ಕಿಲೋಮೀಟರ್‌ಗಳ ಆಳದಲ್ಲಿ ಬುಲ್ ಶಾರ್ಕ್ ಕಂಡುಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button