
ಹಲವರು ರೆಸ್ಟೊರೆಂಟ್‌ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡೋ ಸೂಪ್ ಎಂದರೆ ಹಾಟ್ ಆ್ಯಂಡ್ ಸೋರ್ ಸೂಪ್. ಹುಳಿ, ಸಿಹಿ, ಖಾರದ ಮಿಶ್ರಣದಲ್ಲಿ ನಾಲಿಗೆಯ ರುಚಿ ಹೆಚ್ಚಿಸುವ ಈ ಸೂಪ್ ಹೆಚ್ಚಿನವರ ಎವರ್ ಗ್ರೀನ್ ಫೇವರೆಟ್ ಎಂದರೆ ತಪ್ಪಲ್ಲ. ನಾವಿಂದು ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ (Chicken Hot and Sour Soup) ಮನೆಯಲ್ಲೇ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ರೆಸ್ಟೋರೆಂಟ್ ಹೋಗೋ ಬದಲು ಮನೆಯಲ್ಲಿ ಇದನ್ನು ಟ್ರೈ ಮಾಡಿ ನಾಲಿಗೆಗೆ ಮಜ ನೀಡಿ.
ಬೇಕಾಗುವ ಪದಾರ್ಥಗಳು:
ಚಿಕನ್ – ಅರ್ಧ ಕೆಜಿ
ಹೆಚ್ಚಿದ ಕ್ಯಾರೆಟ್ – ಅರ್ಧ ಕಪ್
ಹೆಚ್ಚಿದ ಎಲೆಕೋಸು – ಅರ್ಧ ಕಪ್
ಮೊಟ್ಟೆ – 1
ಟೊಮೆಟೊ ಕೆಚಪ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ರೆಡ್ ಚಿಲ್ಲಿ ಪೇಸ್ಟ್ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಟೀಸ್ಪೂನ್
ಕಾಳು ಮೆಣಸಿನಪುಡಿ – ರುಚಿಗೆ ತಕ್ಕಷ್ಟು
ಕಾರ್ನ್ ಫ್ಲೋರ್ – 1 ಟೀಸ್ಪೂನ್
ಬೆಣ್ಣೆ – 1 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಸ್ವಲ್ಪ ನೀರು ಹಾಕಿ ಕುದಿಸಿ.
* ಚಿಕನ್ ಸೇರಿಸಿ ಚೆನ್ನಾಗಿ ಬೇಯಲು ಬಿಡಿ.
* ಈಗ ಒಂದು ಸ್ಟ್ರೈನರ್ ಬಳಸಿ ಚಿಕನ್ ಹಾಗೂ ಸ್ಟಾಕ್(ಚಿಕನ್ ಬೇಯಿಸಿದ ನೀರು) ಅನ್ನು ಬೇರ್ಪಡಿಸಿ.
* ಸ್ಟಾಕ್‌ಗೆ ರೆಡ್ ಚಿಲ್ಲಿ ಪೇಸ್ಟ್, ಸೋಯಾ ಸಾಸ್, ವಿನೆಗರ್, ಟೊಮೆಟೊ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪಕ್ಕಕ್ಕಿಡಿ.
* ಈಗ ಪ್ಯಾನ್‌ನಲ್ಲಿ ಸ್ವಲ್ಪ ಬೆಣ್ಣೆ ಹಾಕಿ ಕರಗಿಸಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿ.
* ಕ್ಯಾರೆಟ್, ಎಲೆಕೋಸು ಸೇರಿಸಿ 5 ನಿಮಿಷ ಫ್ರೈ ಮಾಡಿ.
* ಈಗ ಅದಕ್ಕೆ ಸ್ಟಾಕ್ ಅನ್ನು ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಉಪ್ಪು, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ.
* ಚಿಕನ್ ತುಂಡುಗಳನ್ನು ಸೇರಿಸಿ 10 ನಿಮಿಷ ಕುದಿಸಿ.
* ಈ ನಡುವೆ ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಹಾಕಿ ಸ್ಲರಿ ಮಿಶ್ರಣ ತಯಾರಿಸಿ.
* ಸ್ಲರಿಯನ್ನು ಸೂಪ್‌ಗೆ ಸೇರಿಸಿ ದಪ್ಪವಾಗುವವರೆಗೆ ಮಿಶ್ರಣ ಮಾಡಿ.
* ಈಗ ಮೊಟ್ಟೆಯನ್ನು ಒಡೆದು, ಸೂಪ್‌ಗೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
* ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪು ಸೇರಿಸಿ.
* ಇದೀಗ ಚಿಕನ್ ಹಾಟ್ ಆಂಡ್ ಸೋರ್ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ.