
ಆಪಲ್(Apple) ಕಂಪನಿಯ ಸಿಇಒ ಟಿಮ್ ಕುಕ್ (Tim Cook) ಸಂಬಳ ಭಾರೀ ಕಡಿತವಾಗಿದೆ.
ಅಚ್ಚರಿಯ ವಿಷಯ ಏನೆಂದರೆ ಕಂಪನಿ ಸಂಬಳವನ್ನು (Salary) ಕಡಿತ ಮಾಡಿಲ್ಲ. ಸ್ವತ: ಟಿಮ್ ಕುಕ್ ತನ್ನ ಸಂಬಳ ಬಹಳ ಹೆಚ್ಚಾಗಿದೆ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಮಾಹಿತಿ ನೀಡಿದ ಆಪಲ್ ಟಿಮ್ ಕುಕ್ ಅವರ ಸಂಬಳವನ್ನು 49 ದಶಲಕ್ಷ ಡಾಲರ್‌ಗೆ (ಅಂದಾಜು 398 ಕೋಟಿ ರೂ.) ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ.
ಕುಕ್ 2022ರಲ್ಲಿ 99.4 ದಶಲಕ್ಷ ಡಾಲರ್(ಅಂದಾಜು 808 ಕೋಟಿ ರೂ.) ಪಡೆಯುತ್ತಿದ್ದರು. ಈ ವರ್ಷದ ಪರಿಷ್ಕರಣೆಯಿಂದ ಅರ್ಧಕ್ಕರ್ಧ ಸಂಬಳ ಇಳಿಕೆಯಾಗಿದೆ.
ಕಳದ ವರ್ಷ ನಡೆದ ವಾರ್ಷಿಕ ಷೇರುದಾರರ ಸಭೆಯಲ್ಲಿ ಟಿಮ್ ಕುಕ್ ಸಂಬಳದ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಬಹುಸಂಖ್ಯೆ ಷೇರುದಾರರು ಕುಕ್ ಸಂಬಳದ ಪರವಾಗಿಯೇ ಮತ ಹಾಕಿದ್ದರು. ಹೀಗಾಗಿ ಟಿಮ್ ಕುಕ್ ಸಂಬಳ ಪರಿಷ್ಕರಣೆಯಾಗಿರಲಿಲ್ಲ.
ಕುಕ್ 1998 ರಲ್ಲಿ ಆಪಲ್ ಕಂಪನಿ ಸೇರಿದ್ದರು. ಸ್ವೀವ್ ಜಾಬ್ಸ್ ನಿಧನದ ಬಳಿಕ 2011ರಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಕುಕ್ ಅಧಿಕಾರದ ಅವಧಿಯಲ್ಲಿ ಆಪಲ್ ಕಂಪನಿಯ ಮಾರುಕಟ್ಟೆಯ ಮೌಲ್ಯ ಭಾರೀ ಏರಿಕೆಯಾಗಿದೆ. 2011ರಲ್ಲಿ 348 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದ್ದ ಆಪಲ್ ಕಂಪನಿ ಈಗ 2.12 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಹೆಚ್ಚಿಸುವಲ್ಲಿ ಕುಕ್ ಶ್ರಮ ಬಹಳಷ್ಟಿದೆ.