Transport

ಬಸ್ ಗಳಲ್ಲಿ ನಡೆಯುವ ಅವ್ಯವಹಾರ ಪತ್ತೆಹಚ್ಚಲು ಸಾಮಾನ್ಯ ಪ್ರಯಾಣಿಕನಂತೆ ಬಸ್ ಹತ್ತಿದ ಕಮಿಷನರ್: ಮುಂದಾಗಿದ್ದೇನು ನೋಡಿ

ಉತ್ತರಪ್ರದೇಶದ ಕಾನ್ಪುರದ ಕಮಿಷನರ್ ಡಾ.ರಾಜಶೇಖರ್ ತಮ್ಮ ಇಲಾಖೆಯಲ್ಲಿ ಓಡುತ್ತಿರುವ ಸಿಟಿ ಬಸ್ ಗಳ ನಿರ್ವಹಣೆ ಮತ್ತು ಸೇವೆಯನ್ನು ತಿಳಿಯಲು ಅದ್ಭುತವಾದ ಅಭಿಯಾನವೊಂದನ್ನು ಆರಂಭಿಸಿದರು. ಡಾ.ರಾಜಶೇಖರ್ ಸ್ವತಃ ಪ್ರಯಾಣಿಕರ ವೇಷದಲ್ಲಿ ಸಿಟಿ ಬಸ್ ನಲ್ಲಿ ಪ್ರಯಾಣಿಸಲು ಆರಂಭಿಸಿದರು. ಈ ಸಮಯದಲ್ಲಿ, ಸಿಟಿ ಬಸ್‌ನ ಚಾಲಕ ಮತ್ತು ಕಂಡಕ್ಟರ್‌ನ ಅನೇಕ ತಪ್ಪುಗಳು ಅವರ ಗಮನಕ್ಕೆ ಬಂದವು. ಹಲವು ಪ್ರಕರಣಗಳಲ್ಲಿ ಸಡಿಲಿಕೆಯಿಂದಾಗಿ, ಆಯುಕ್ತ ರಾಜಶೇಖರ್ 14 ಬಸ್ ಚಾಲಕರನ್ನು ಸೇವೆಯಿಂದ ತೆಗೆದುಹಾಕಿದರು ಮತ್ತು 13 ಬಸ್ ಕಂಡಕ್ಟರ್‌ಗಳನ್ನು ಅಮಾನತುಗೊಳಿಸಿದ್ದಾರೆ.

ಕಳೆದ ಗುರುವಾರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸಿಟಿ ಬಸ್ಸಿನ ವಾಸ್ತವತೆಯನ್ನು ತಿಳಿಯಲು ರಾಜಶೇಖರ್ ಅಧಿಕಾರಿಗಳೊಂದಿಗೆ ಚುನ್ನಿಗಂಜ್ ಮತ್ತು ರಾವತ್ ಪುರದಿಂದ ಹರ್ಷ ನಗರಕ್ಕೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಕರಂತೆ ಕುಳಿತಿದ್ದರು. ಈ ಸಮಯದಲ್ಲಿ, ಕಂಡಕ್ಟರ್ ತನ್ನ ಮುಖದ ಮೇಲೆ ಮಾಸ್ಕ್‌ನ್ನ ಹಾಕಿಕೊಂಡಿರದಿದ್ದನ್ನ ಅವರು ಕಂಡರು. ಬಸ್ಸಿನಲ್ಲಿದ್ದ ಅರ್ಧಕ್ಕಿಂತ ಹೆಚ್ಚು ಪ್ರಯಾಣಿಕರೂ ಬಾಯಿಗೆ ಮಾಸ್ಕ್ ಹಾಕಿರಲಿಲ್ಲ. ಡ್ರೈವರ್ ಕೂಡ ಕರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ ಅವರ ವಿರುದ್ಧ ಕ್ರಮವನ್ನು ಕೈಗೊಂಡ ರಾಜ್ಯ ಶೇಖರ್ 14 ಬಸ್ ಚಾಲಕರನ್ನು ಶಾಶ್ವತವಾಗಿ ಕರ್ತವ್ಯದಿಂದ ಬಿಡುಗಡೆ ಮಾಡಿದರು ಮತ್ತು 13 ಕಂಡಕ್ಟರ್‌ಗಳನ್ನು ಕೆಲದಿನಗಳ ಕಾಲ ಅಮಾನತುಗೊಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ, ಈ ನಗರ ಬಸ್‌ಗಳ ಚಾಲಕ ಮತ್ತು ನಿರ್ವಹಣೆಯನ್ನು ಒದಗಿಸುವ ಏಜೆನ್ಸಿಗೆ ಶೋಕಾಸ್ ನೋಟಿಸ್ ಅನ್ನು ಸಹ ನೀಡಲಾಗಿದೆ. ಕಳಪೆ ನಿರ್ವಹಣೆ, ಕೆಟ್ಟ ಮೇಲ್ವಿಚಾರಣೆ ಮತ್ತು ಬಸ್ ಚಾಲಕರ ಮೇಲೆ ನಿಯಂತ್ರಣವಿಲ್ಲದ ಕಾರಣ ಈ ಏಜೆನ್ಸಿಗಳಿಗೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಅಲ್ಟಿಮೇಟಮ್ ನೀಡಲಾಗಿದೆ.

ಈ ಅಭಿಯಾನದ ಸಮಯದಲ್ಲಿ, ಆಯುಕ್ತರು ಮತ್ತು ಅವರ ಆರು ಅಧಿಕಾರಿಗಳು ಅನೇಕ ಬಸ್ಸುಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ (ಫರ್ಸ್ಟ್ ಏಡ್ ಬಾಕ್ಸ್)ಗಳು ಇಲ್ಲದಿರೋದನ್ನೂ ಗಮನಿಸಿದ್ದಾರೆ, ಅನೇಕ ಬಸ್ಸುಗಳಲ್ಲಿ ಎಲ್ಇಡಿ ಸ್ಕ್ರೀನ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಕೆಲವು ಬಸ್ಸುಗಳಲ್ಲಿ ಕಂಡಕ್ಟರ್ ಮತ್ತು ಚಾಲಕರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ.

ಕಂಡಕ್ಟರ್ ಪ್ರಯಾಣಿಕರಿಂದ ಹಣ ಪಡೆದ ನಂತರ ಟಿಕೆಟ್ ನೀಡುತ್ತಿಲ್ಲ ಮತ್ತು ಪ್ರಯಾಣಿಕರಿಗೆ ಮಾಸ್ಕ್ ಧರಿಸುವಂತೆ ಕಂಡಕ್ಟರ್ ನಿಂದ ಎಚ್ಚರಿಕೆ ನೀಡುತ್ತಿಲ್ಲ ಎಂದು ಕಂಡುಬಂದಿದೆ. ಈ ಎಲ್ಲಾ ಸಣ್ಣ ತಪ್ಪುಗಳಿಂದಾಗಿ, ಕರೋನವೈರಸ್ ಹರಡುವಿಕೆಯು ಮತ್ತಷ್ಟು ಹೆಚ್ಚಾಗಬಹುದು, ಈ ಕಾರಣದಿಂದಾಗಿ ಈ ಎಲ್ಲಾ ಚಾಲಕರು ಮತ್ತು ಕಂಡಕ್ಟರ್‌ಗಳ ವಿರುದ್ಧ ಇದೀಗ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ವಿಶೇಷವೆಂದರೆ ಕಾನ್ಪುರದ ಡಾ.ರಾಜಶೇಖರ್ ಮೂಲತಃ ಕರ್ನಾಟಕದ ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನವರು.

Show More

Related Articles

Leave a Reply

Your email address will not be published. Required fields are marked *

Back to top button