
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ: ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಡಿ ಬಾಸ್
ಕರ್ನಾಟಕದ ಇತಿಹಾಸದಲ್ಲಿ ಕನ್ನಡ ಚಿತ್ರರಂಗದಲ್ಲೇ ಹೊಸ ಅಲೆಯನ್ನು ಸೃಷ್ಟಿಸಿದ ಅಭಿಮಾನಿಗಳ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ದರ್ಶನ್ ಅವರ ನಿವಾಸ ಬಳಿ ಆಗಮಿಸಿದ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.
ಬನ್ನೂರಿನ ಸಮಾಜ ಸೇವಕರು,ಬನ್ನೂರಿನ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ದರ್ಶನ್ ರವರಿಗೆ ಉಡುಗೊರೆ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.
ಯಾವುದೇ ಆಡಂಬರವಿಲ್ಲದೇ ದರ್ಶನ್ ರವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅವರ ಸಮಾಜ ಸೇವೆಗೆ ತಮ್ಮ ತಮ್ಮ ಕೈಲಾದ ಸಹಾಯವನ್ನು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಶುಭಾಶಯ ಕೋರಿದ್ದರು.
ಈ ಕುರಿತು ಡಾ.ಕೆ. ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 46ನೇ ವರ್ಷದ ಹುಟ್ಟುಹಬ್ಬವು ಇಂದು ಸರಳವಾಗಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ತುಂಬಾನೇ ಖುಷಿಯಾಗಿದೆ ಎಂದು ತಿಳಿಸಿದರು.
ಯಾವುದೇ ಕೇಕ್ ಕತ್ತರಿಸುವುದು, ಸನ್ಮಾನ, ಸಮಾರಂಭವಿಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನನಗೆ ಹಾಗೂ ಅವರ ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ. ರ್ಶನ್ ಅವರ ಸಮಾಜ ಸೇವೆಗೆ ಅವರ ಅಭಿಮಾನಿಗಳು ಧವಸ, ಧಾನ್ಯಗಳನ್ನು ಯತೇಚ್ಛವಾಗಿ ತಂದು ನೀಡುತ್ತಿದ್ದಾರೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ದರ್ಶನ್ ಅಭಿನಯದ 56ನೇ ಸಿನಿಮಾ ಕಾಟೇರಾದ ಟ್ರೈಲರ್ ನ್ನು ಬಿಡುಗಡೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಇದರ ಹಿಂದಿನ ಚಿತ್ರ ಕ್ರಾಂತಿ ಸಿನಿಮಾ ಒಳ್ಳೆ ಮೆಸೇಜ್’ನೊಂದಿಗೆ ಸಾರ್ವಜನಿಕರ ಜನಮನ ತಲುಪಿದೆ. ಇದೆ ರೀತಿ ಮುಂದಿನ ದಿನಗಳಲ್ಲಿ ದರ್ಶನ್ ರವರು ಉತ್ತಮ ಚಿತ್ರಗಳನ್ನು ಸಮಾಜಕ್ಕೆ ನೀಡುತ್ತಾ ಬರಲಿ ಎಂದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಕಲಾವಿದರುಗಳಾದ ಅಭಿಷೇಕ್ ಅಂಬರೀಶ್, ತರುಣ್ ಕಿಶೋರ್ ಸುಧೀರ್, ವಿನೋದ್ ಪ್ರಭಾಕರ್ ,ಚಿಕ್ಕಣ್ಣ, ಧರ್ಮಕೀರ್ತಿರಾಜ್, ಚಂದು, ಸಂತೋಷ್, ಪ್ರದೀಪ, ಸುರೇಶ್, ಲೋಕೇಶ್, ಸಿ.ಕೆ. ಮಹೇಶ್, ಪುಟ್ಟಬುದ್ದಿ, ನಾಗೇಶ್, ರಾಮು, ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಗೋವಿಂದರಾಜು, ಮೈಸೂರು ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜು, ಶಿವಕುಮಾರ್, ರೇಣುಕಾ ಸ್ವಾಮಿ, ಶ್ರೀನಿವಾಸ, ರಾಜೇಶ್ ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು.