
ಇಂದಿನ ಕಾಲದಲ್ಲಿ ಮನೆಯಲ್ಲಿ ದೊರೆತ ಹಿರಿಯರ ಅನೇಕ ಕಾಗದ ಪತ್ರಗಳನ್ನು ಹಿಂದೆ ಮುಂದೆ ಯೋಚಿಸದೆ ನಾವು ಗುಜರಿಗೆ ಹಾಕುವ ಪ್ರಯತ್ನವನ್ನು ಮಾಡುತ್ತೇವೆ. ಎಷ್ಟೋ ಸಲ ಇಂಥದರಲ್ಲಿ ಕೆಲವರಿಗೆ ಖಜಾನೆಯು ಸಿಗುವುದುಂಟು. ಸಧ್ಯ ಇದೇ ರೀತಿಯ ಒಂದು ಇಂಟರೆಸ್ಟಿಂಗ್ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಿಂದ ವರದಿಯಾಗಿದೆ. ಇಲ್ಲಿ ವ್ಯಕ್ತಿಯೊಬ್ಬ ತಂದೆಯ ಹಳೆಯ ಪಾಸ್ ಬುಕ್ ನಿಂದಾಗಿ ಕ್ಷಣದಲ್ಲಿ ಕೋಟ್ಯಾಧೀಶನಾಗಿದ್ದಾನೆ. ಪ್ರಸ್ತುತ ವ್ಯಕ್ತಿಗೆ ಆತನ ತಂದೆಯ 50 ವರ್ಷಗಳ ಹಿಂದಿನ ಹಳೆಯ ಪಾಸ್ ಬುಕ್ ಹಠಾತ್ ಸಿರಿವಂತನನ್ನಾಗಿ ಮಾಡಿದೆ.
ಗಣೇಶ್ ಹೆಸರಿನ ಯುವಕನ ತಂದೆ 1960 ಹಾಗೂ 70ರ ದಶಕದಲ್ಲಿ ಮನೆಯನ್ನು ಖರೀದಿ ಮಾಡುವ ಸಲುವಾಗಿ ಹಣವನ್ನು ಕೂಡಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರು 12 ಸಾವಿರದ 684 ರೂಪಾಯಿಗಳನ್ನು ಕೂಡಿ ಹಾಕಿದ್ದರು.
ಗಣೇಶನ ತಂದೆಯವರು ಆ ಹಣವನ್ನು ಯೂನಿಯನ್ ಬ್ಯಾಂಕಿನಲ್ಲಿ ಕ್ರೆಡಿಟ್ ಮಾಡಿದ್ದರು. ತಂದೆಯ ಸಾವಿನ ನಂತರ ಗಣೇಶ್ ಅವರ ಪಾಸ್ ಬುಕ್ ನ್ನು ಒಂದು ಪೆಟ್ಟಿಗೆಯಲ್ಲಿ ಹಳೆಯ ಕಾಗದ ಪತ್ರಗಳ ಜೊತೆಗೆ ತೆಗೆದು ಇಟ್ಟಿದ್ದನು. ಒಂದು ದಿನ ಗಣೇಶ್ ಏನನ್ನೋ ಶೋಧಿಸುವಾಗ ಪೆಟ್ಟಿಗೆಯಲ್ಲಿಯ ಕಾಗದಪತ್ರಗಳಲ್ಲಿ ತಂದೆಯ ಹಳೆಯ ಪಾಸ್ ಬುಕ್ ಆತನ ಕೈಗೆ ಸಿಕ್ಕಿತು. ಅದನ್ನು ತೆಗೆದು ನೋಡಲಾಗಿ ಅವರ ಖಾತೆಯಲ್ಲಿ ಸ್ವಲ್ಪ ಹಣ ಜಮೆ ಇದ್ದದ್ದು ಕಂಡು ಬಂತು. ಆ ಹಣವನ್ನು ನೋಡಿ ಅದಕ್ಕೆ ಅಷ್ಟು ಬೆಲೆ ಕೊಡದೆ ಇದೇನು ಮಹಾ ಎಂದು ಯೋಚಿಸಿ ಪುನಃ ಪೆಟ್ಟಿಗೆಯಲ್ಲಿಟ್ಟು ಬಂದ್ ಮಾಡಬೇಕೆನ್ನುವಷ್ಟರಲ್ಲಿ ಪಾಸ್ ಬುಕ್ ಮೇಲಿದ್ದ ಸ್ಟೇಟ್ ಗ್ಯಾರಂಟಿ ಎಂಬ ಶಬ್ದವನ್ನು ನೋಡಿದನು.
60 ವರ್ಷಗಳ ಹಿಂದಿನ ಆ ಹಣ ಈಗ ಹಣದುಬ್ಬರದ ಸಮಯದಲ್ಲಿ ಎಷ್ಟೊಂದು ಪಟ್ಟು ಹೆಚ್ಚಾಗಿರಬೇಕು? ಈ ಹಣ 9.33 ಕೋಟಿ ರೂಪಾಯಿಗಳಲ್ಲಿ ಹೆಚ್ಚಾಗಿರಬೇಕು ಅಲ್ಲವೇ? ಎಂದು ಯೋಚಿಸಿ ಪ್ರಸ್ತುತ ಪ್ರಕರಣವನ್ನು ನ್ಯಾಯಾಲಯಕ್ಕೆ ಹಾಕಿದಾಗ ಕೋರ್ಟ್ ಗಣೇಶನಿಗೆ ತಂದೆಯ ಪಾಸ್ ಬುಕ್ ಸಾದರಪಡಿಸಲು ಆದೇಶ ನೀಡಿತು. ಅದನ್ನು ನೋಡಿದ ನಂತರ ಕೋರ್ಟ್ ಪ್ರಸ್ತುತ ಹಣವನ್ನು ರಾಜ್ಯವು ಖಾತರಿಪಡಿಸಿ ಕೊಡಬೇಕೆಂದು ಹೇಳಿತು.
ತದನಂತರ ಗಣೇಶನು ರಾಜ್ಯ ಸರ್ಕಾರದ ಕಡೆಗೆ ತನ್ನ ತಂದೆಯ ಹಣವನ್ನು ಮರಳಿ ಪಡೆಯುವ ಸಲುವಾಗಿ ದಾವೆ ಮಾಡಿದನು. ಆಗ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿತು. ಸುಪ್ರೀಂ ಕೋರ್ಟ್ ನಲ್ಲಿಯೂ ನ್ಯಾಯ ಗಣೇಶನ ಕಡೆಗೆ ವಾಲಿತು. ಈ ರೀತಿ ಗಣೇಶನಿಗೆ 10 ಕೋಟಿ ರೂಪಾಯಿಗಳು ಸಿಕ್ಕವು.