LatestNationalTransport

ಉಬರ್ ಪ್ರೀಮಿಯಂ ಟ್ಯಾಕ್ಸಿಯಾಗಿ ರಸ್ತೆಗಿಳಿಯಲಿವೆ 25 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳು

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ ಮತ್ತು ಉಬರ್ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಉಬರ್‌ಗೆ 25,000 XPRES-T ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ಮೊಟಾರ್ಸ್ ಕಂಪನಿಯು ಪೂರೈಸಲಿದೆ. ಈ ಎರಡು ಕಂಪನಿಗಳು ಒಪ್ಪಂದದ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಟಾಟಾ ಮೋಟಾರ್ಸ್ ಮತ್ತು ಉಬರ್ ಕಂಪನಿಗಳ ನಡುವಿನ ಒಪ್ಪಂದದ ಪ್ರಕಾರ, ಉಬರ್ ತನ್ನ ಪ್ರೀಮಿಯಂ ವರ್ಗದ ಸೇವೆಯಲ್ಲಿ ಎಲೆಕ್ಟ್ರಿಕ್ ಸೆಡಾನ್‌ ವಾಹನಗಳನ್ನು ಬಳಸಿಕೊಳ್ಳಲಿದೆ. ಟಾಟಾ ಮೊಟಾರ್ಸ್ ಕಂಪನಿಯು ಉಬರ್‌ನ ಪಾಲುದಾರರಿಗೆ ಕಾರುಗಳನ್ನು ಹಂತ ಹಂತವಾಗಿ ವಿತರಣೆ ಮಾಡಲಿದ್ದು, ಈ ತಿಂಗಳಿನಿಂದ ವಿತರಣೆ ಆರಂಭವಾಗಲಿದೆ. ಉಬರ್ ತನ್ನ ಹೊಸ ಟಾಟಾ XPRES-T ಎಲೆಕ್ಟ್ರಿಕ್ ಕಾರುಗಳನ್ನು ತನ್ನ ಪ್ರೀಮಿಯಂ ವರ್ಗದ ಸೇವೆಗಳ ಭಾಗವಾಗಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ನಿಯೋಜಿಸಲಿದೆ.

ಈ ಎಲೆಕ್ಟ್ರಿಕ್ ಕಾರುಗಳು ದೆಹಲಿ NCR, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಅಹಮದಾಬಾದ್ ನಗರಗಳಲ್ಲಿ ಸೇವೆಯನ್ನು ಒದಗಿಸಲಿದೆ. ಟಾಟಾ XPRES-T ಎಲೆಕ್ಟ್ರಿಕ್ ಕಾರು ಟಾಟಾದ ಟಿಗೋರ್ ಎಲೆಕ್ಟ್ರಿಕ್ ಕಾರಿನ ಕಮರ್ಷಿಯಲ್ ವಾಹನ ಆವೃತ್ತಿಯಾಗಿದೆ ಮತ್ತು ಅದರ ನೋಟದಲ್ಲಿ ಅದರ ಒಡಹುಟ್ಟಿದ ಮಾದರಿಗೆ ಹೋಲುತ್ತದೆ. ಭಾರತದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ರಿಕ್ ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಇತ್ತೀಚೆಗೆ ಟಾಟಾ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು ಮಾತನಾಡಿ, ಭಾರತಕ್ಕೆ ಸುಸ್ಥಿರ, ಪರಸ್ಪರ ಹಂಚಿಕೊಳ್ಳುವ ಕ್ಯಾಬ್‌ ಸೇವೆಯನ್ನು ತರಲು ಉಬರ್ ಬದ್ಧವಾಗಿದೆ ಮತ್ತು ಟಾಟಾ ಮೋಟಾರ್ಸ್‌ನೊಂದಿಗಿನ ಈ ಪಾಲುದಾರಿಕೆಯು ಈ ಪ್ರಯಾಣದಲ್ಲಿ ಪ್ರಮುಖವಾಗಿದೆ, ಈ ಪ್ರಯಾಣದಲ್ಲಿ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ. ಇದು ಭಾರತದಲ್ಲಿ ವಾಹನ ತಯಾರಿಕಾ ಸಂಸ್ಥೆ ಮತ್ತು ರೈಡ್‌ಶೇರಿಂಗ್ ಪ್ಲಾಟ್‌ಫಾರ್ಮ್ ನಡುವಿನ ಅತಿದೊಡ್ಡ ಎಲೆಕ್ಟ್ರಿಕ್‌ ವಾಹನ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ.

ಇದು ಉಬರ್ ಪ್ಲಾಟ್‌ಫಾರ್ಮ್‌ನಲ್ಲಿ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವಾಗ ಶೂನ್ಯ ಹೊರಸೂಸುವಿಕೆಗೆ ಪರಿವರ್ತನೆಯನ್ನು ಬೆಂಬಲವನ್ನು ನೀಡುತ್ತದೆ. ನಮ್ಮ ಭಾಗವನ್ನು ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಈ ಹೊ ಟಾಟಾ XPRES-T ಎಲೆಕ್ಟ್ರಿಕ್ ಕಾರಿನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳಿಂದ ಚಾಲಿತವಾಗಿದ್ದು, ARAI ಪರೀಕ್ಷಾ ಚಕ್ರದ ಪ್ರಕಾರ ಒಂದೇ ಚಾರ್ಜ್‌ನಲ್ಲಿ 315 ಕಿ,ಮೀ ಅಥವಾ 277 ಕಿ,ಮೀ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಬ್ಯಾಟರಿ ಪ್ಯಾಕ್ 40.2 bhp ಮತ್ತು 105 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ.

2021 ರಲ್ಲಿ, ಟಾಟಾ ಮೋಟಾರ್ಸ್ ಟಿಗೋರ್ ಶ್ರೇಣಿಯನ್ನು ಎರಡು ಪ್ರತ್ಯೇಕ ಬ್ರ್ಯಾಂಡ್‌ಗಳಾಗಿ ವೈವಿಧ್ಯಗೊಳಿಸಿತು. ಟಿಗೋರ್ ಇವಿ ಅನ್ನು ಖಾಸಗಿ ಪ್ರಯಾಣಿಕ ವಾಹನ ಬಳಕೆಗಾಗಿ ಗೊತ್ತುಪಡಿಸಲಾಗಿದೆ ಆದರೆ ಎಕ್ಸ್‌ಪ್ರೆಸ್‌-ಟಿ ಬ್ರ್ಯಾಂಡ್ ಅನ್ನು ಫ್ಲೀಟ್‌ಗಳಿಗಾಗಿ ಪ್ರತ್ಯೇಕವಾಗಿ ಪ್ರಾರಂಭಿಸಲಾಯಿತು. Uber ಜೊತೆಗಿನ ಟಾಟಾ ಪಾಲುದಾರಿಕೆಯ ಮೂಲಕ ಭಾರತದ ಪ್ರಮುಖ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ತಯಾರಕರು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಮತ್ತೊಂದು ಕ್ರಾಂತಿ ಮಾಡಿದೆ, ಟಾಟಾ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಸರಿಸಾಟಿ ಇಲ್ಲದೇ ಮುನ್ನುಗುತ್ತಿದೆ.

ಇನ್ನು ಸ್ವದೇಶಿ ಟಾಟಾ ಮೋಟಾರ್ಸ್ ಇತ್ತೀಚೆಗೆ 2023ರ ಜನವರಿ ತಿಂಗಳ ವಾಹನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ, ಟಾಟಾ ಮೋಟಾರ್ಸ್ ದೇಶದಲ್ಲಿ ಎರಡನೇ ಶ್ರೇಯಾಂಕಕ್ಕಾಗಿ ಅಗ್ರೇಸಿವ್ ಆಗಿ ಸ್ಪರ್ಧಿಸುತ್ತಿದೆ. 2023ರ ಜನವರಿ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 47,990 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು40,780 ಯುನಿಟ್‌ಗಳನ್ನು ಮಾರಾಟ ಮಾಡಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 18 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Show More

Related Articles

Leave a Reply

Your email address will not be published. Required fields are marked *

Back to top button