Bengaluru CityLatestState

BBMP ವಿಭಜನೆ ಮಾಡಿ ಗ್ರೇಟರ್‌ ಬೆಂಗಳೂರು ನಿರ್ಮಾಣಕ್ಕೆ ಮುಂದಾದ ಸರ್ಕಾರ; ಬೆಂಗಳೂರಿನ ಸುತ್ತಲಿನ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ

ಕಾಂಗ್ರೆಸ್ ಸರ್ಕಾರ ಪಾಲಿಕೆ ಇಬ್ಭಾಗ ಮಾಡುತ್ತಾ? ಹೀಗೊಂದು ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಕೂಗು ಕೇಳಿ ಬಂದಿದೆ. ಪಾಲಿಕೆಯ ಅಭಿವೃದ್ಧಿ ದೃಷ್ಟಿಯಿಂದ  ಐದು ಭಾಗಗಳಗಿ ವಿಂಗಡಿಸಿ ಗ್ರೇಟರ್‌ ಬೆಂಗಳೂರು ನಿರ್ಮಾಣಕ್ಕೆ ಸಮಿತಿ ವರದಿ ನೀಡಿದೆ.

ಬಿಬಿಎಂಪಿ ಐದು ಭಾಗಗಳಾಗಿ ವಿಂಗಡಣೆ ಮಾಡಲು ಕಾಂಗ್ರೆಸ್ ಪಕ್ಷ (Congress) ತುದಿ ಗಾಲಲ್ಲಿ ನಿಂತಿದೆ. ಕಳೆದ ಮೂರುವರೆ ವರ್ಷದಿಂದ ಪಾಲಿಕೆಗೆ ಚುನಾವಣೆ ಮಾಡದೆ ಕಾಲಾಹರಣ ಮಾಡುತ್ತಿದ ರಾಜ್ಯ ಸರ್ಕಾರ ಈಗ ಬಿಬಿಎಂಪಿ (BBMP) ಇಬ್ಭಾಗಕ್ಕೆ ಮುಹೂರ್ತ ಪಿಕ್ಸ್ ಮಾಡೋದಕ್ಕೆ ಹೋರಟಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಬಿಬಿಎಂಪಿ ವಿಭಜನೆ ಮಾತು ಕೇಳಿ ಬರ್ತಿದೆ. 5 ಭಾಗ ಮಾಡುದ್ರೆ ನಗರದ ಅಭಿವೃದ್ಧಿಗೆ ಸಹಾಯವಾಗುತ್ತೆ. ಐದು ಕಡೆ ಮೇಯರ್ ನಮ್ಮ ಪಕ್ಷದವರನ್ನ ಆಯ್ಕೆ ಮಾಡಬಹುದು ಎಂದು ಬೆಂಗಳೂರಿನ ಕಾಂಗ್ರೆಸ್ ಶಾಸಕರು ಮೊನ್ನೆ ನಡೆದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.

ಸದ್ಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲದ್ದಿದರೂ ಮತಗಳಿಕೆಯಲ್ಲಿ ಶೇಕಡಾ ವಾರು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆ ಸ್ವಲ್ಪ ಮಟ್ಟಿಗೆ ಕೈ ಹಿಡಿಯಬಹುದು ಅಂತ ಸಲಹೆ ನೀಡಿದ್ದಾರೆ. ಇನ್ನೂ ಬಿಬಿಎಂಪಿ ವಿಭಜನೆಗೆ ಸಮಿತಿ ರಚನೆ ಮಾಡಿದ್ದು, ಸಮಿತಿಯ ಅಧ್ಯಕ್ಷ ಬಿ.ಎಸ್. ಪಾಟೀಲ್ ಕೂಡ ಆಡಳಿತ ದೃಷ್ಟಿಯಿಂದ ಪಾಲಿಕೆ ವಿಭಜನೆ ಮಾಡೋದು ಸರಿ ಅಂತ ಸಭೆಯಲ್ಲಿ ತಿಳಿಸಿದ್ದಾರೆ. ಇನ್ನೂ ಬಿಬಿಎಂಪಿ ವಿಭಜನೆ ಹಾಗೂ ಚುನಾವಣೆ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಲು ಚರ್ಚೆ ಮಾಡಲಾಗಿದೆ. ಮಳೆಗಾಲ ಬಳಿಕ 225 ವಾರ್ಡ್ ಗಳ ಚುನಾವಣೆಯನ್ನ ನಡೆಸಲು ಕೋರ್ಟ್ ಸೂಚನೆ ನೀಡಿದೆ. ಕಾನೂನು ತೊಡಕು ಮೀಸಲಾತಿ ತೊಡಕು ಬಗೆಹರಿಸಿ ಚುನಾವಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಐದು ಭಾಗ ಹೇಗೆ? ಮಾನದಂಡ ಏನು ಎಂಬ ಬಗ್ಗೆ ಬಿಎಸ್ ಪಾಟೀಲ್ ನೇತೃತ್ವದ ಸಮಿತಿ ಮಾಡಿರುವ ಶಿಫಾರಸ್ಸುಗಳ ವಿವರ ಹೀಗಿದೆ.

  • ಬಿಬಿಎಂಪಿಯಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರವಂತೆ ಸಲಹೆ
  • ಬೆಂಗಳೂರು ಸುತ್ತಲಿನ ಹಲವು ಪ್ರದೇಶವನ್ನು ಸೇರಿಸಿ 400 ವಾರ್ಡ್ಗಳನ್ನು ರಚಿಸುವಂತೆ ಶಿಫಾರಸು
  • ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಎಂಬ ಐದು ಪಾಲಿಕೆಗಳನ್ನು ರಚಿಸುವಂತೆ ಸಲಹೆ
  • ಇವುಗಳ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಬೇಕು ಎಂದು ವರದಿಯಲ್ಲಿ ಸಲಹೆ
  • ಬೆಂಗಳೂರು ಸುತ್ತಲ್ಲಿನ ನಗರಗಳು ಬಿಬಿಎಂಪಿ ವ್ಯಾಪ್ತಿಗೆ
  • ನೆಲಮಂಗಲ, ಹೊಸಕೋಟೆ, ಬಿಡದಿ, ರಾಮನಗರ, ಕನಕಪುರ, ದೇವನಹಳ್ಳಿ ಸೇರಿ‌ ಬೆಂಗಳೂರು ಗ್ರಾಮಾಂತರದ ಹಲವು ಜಿಲ್ಲೆಗಳು ಬಿಬಿಎಂಪಿ ವ್ಯಾಪ್ತಿಗೆ
  • ಆಡಳಿತ ಕೇಂದ್ರ ಬಿಬಿಎಂಪಿ ಮೂಲಕ ನಗರಗಳ ಅಭಿವೃದ್ಧಿ

ಇನ್ನೂ ಪಾಲಿಕೆ 5 ವಿಂಗಡಣೆ ಮಾಡಿ ಚುನಾವಣೆ ಮಾಡುತ್ತಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇನ್ನೂ ಪಾಲಿಕೆ 5 ಭಾಗ ಮಾಡಲು ಪ್ರಸ್ತಾವನೆ ಇಟ್ಟುಕೊಂಡಿದೆ. ಇದು ತುಂಬಾ ಅನ್ಯಾಯ. ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಈ ಆಗಷ್ಟ್ ಬಂದರೆ 5 ವರ್ಷವಾಗುತ್ತೆ. ಅಧಿಕಾರಿಗಳೆ ಕಾರುಬಾರು ಇದ್ದು, ಸರಿಯಾದ ಕಾಮಗಾರಿಗಳಾಗುತ್ತಿಲ್ಲ. ಇತ್ತ ಸರ್ಕಾರಕ್ಕೆ ಚುನಾವಣೆ ಮುಂದೂಡಲು ಆಯುಧ ಬೇಕಿತ್ತು. ಹೀಗಾಗಿ ಪಾಲಿಕೆ 5 ಭಾಗಗಳಾಗಿ ವಿಂಗಡಣೆ ಮಾಡಿ ಕರಡು ಪ್ರತಿ, ತಕಾರರು ಹಾಕಲು ಸಮಯ ಬೇಕಾಗುತ್ತೆ ಅಂತ ಪಾಲಿಕೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನು ಆಡಳಿತ ದೃಷ್ಟಿ ಅನ್ನೋ ಹೆಸರಲ್ಲಿ ವಿಭಜನೆಗೆ ಕೈ ಇಟ್ಟಿರೋದು ಕೈ ಪಕ್ಷಕ್ಕೆ ಭಾರಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕು.

 

Show More

Related Articles

Leave a Reply

Your email address will not be published. Required fields are marked *

Back to top button