NationalPoliticsState

ಏಳು ಬಜೆಟ್​- ಏಳು ಸೀರೆ- ಏಳು ಬಣ್ಣಗಳು: ಕರ್ನಾಟಕದ ಸಂಸದೆ-ವಿತ್ತ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?

ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್‌ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು.

 

ಕರ್ನಾಟಕದ ಸಂಸದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮೋದಿ ಸರ್ಕಾರದ ಮೂರೂ ಅವಧಿಯ ಆಡಳಿತದಲ್ಲಿ ಸತತವಾಗಿ 7 ಬಜೆಟ್ ಗಳನ್ನು ಮಂಡಿಸುವ ಮೂಲಕ ಮೋದಿ ಆಡಳಿತದಲ್ಲಿ ಕಾಮನಬಿಲ್ಲು ಮೂಡಿಸಿದ್ದಾರೆ. ಅಂದರೆ ಸತತವಾಗಿ ಏಳೂ ಬಜೆಟ್​​​ಗಳ ಮಂಡನೆ ವೇಳೆ ಏಳು ಬಣ್ಣಗಳ ವಿವಿಧ ಸೀರೆಗಳನ್ನು ಧರಿಸುವ ಮೂಲಕ ಆಧ್ಯಾತ್ಮಿಕತೆ ಸೇರಿದಂತೆ ಸಾಕಷ್ಟು ಆಯಾಮಗಳನ್ನು ಪ್ರತಿನಿಧಿಸಿದ್ದಾರೆ. ಹಾಗಾದರೆ, ದೇಶದ ವಿತ್ತ ವಲಯಕ್ಕೆ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?

ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್‌ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು.

 

ತನ್ಮೂಲಕ ಕೇಂದ್ರ ಮೈತ್ರಿ ಸರ್ಕಾರದ ಜೊತೆ ಕೈಜೋಡಿಸಿರುವ ಆಂಧ್ರದ ಟಿಡಿಪಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಡಳಿತಕ್ಕೆ ಸಿಂಹಪಾಲು ಯೋಜನೆಗಳನ್ನು ನೀಡಿದ್ದಾರೆ. ಈ ಸೂಕ್ಷ್ಮ ಸುಳಿವನ್ನು ಗಮನಿಸಿದಾಗ ತಾವು ಇಂದು ಧರಿಸಿರುವ ಸೀರೆಗೆ ತಕ್ಕಂತೆ ದಕ್ಷಿಣ ರಾಜ್ಯಕ್ಕೆ ಭಾರಿ ಹಣಕಾಸು ಹಂಚಿಕೆ ನೀಡಿರುವುದನ್ನು ಎತ್ತಿತೋರಿಸಿದ್ದಾರೆ.

ಕೆಂಪು, ನೀಲಿ, ಹಳದಿ, ಕಂದು ಮತ್ತು ಆಫ್​ ವೈಟ್​​… ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಅವರ ಸೀರೆಗಳ ಛಾಯೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕಥೆಯಿದೆ. ಪ್ರತಿಯೊಂದು ಸೀರೆಯು ಭಾರತದ ಒಂದು ಮೂಲೆಯಿಂದ ವಿಭಿನ್ನ ಸಾಂಸ್ಕೃತಿಕ ಕಥೆಯನ್ನು ಚಿತ್ರಿಸುತ್ತದೆ. ಮತ್ತು ಕೆಲವೊಮ್ಮೆ ಒಳಾಂತರ್ಯದಲ್ಲಿ, ಅವರು ಸೂಕ್ಷ್ಮವಾದ ಬಜೆಟ್ ಸಂದೇಶಗಳನ್ನು ಸಹ ನೀಡಿದ್ದಾರೆ.

ಮಂಗಳವಾರವಾದ ಇಂದು, ಸೀತಾರಾಮನ್ ಅವರು 2024-25ರ ಪೂರ್ಣ ಬಜೆಟ್ ಅನ್ನು ಪ್ರಸ್ತುತಪಡಿಸಲು ಆಂಧ್ರಪ್ರದೇಶದಿಂದ ಮೆಜೆಂಟಾ ಅಂಚಿನೊಂದಿಗೆ ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ಮಂಗಳಗಿರಿ ಸೀರೆಯೊಂದಿಗೆ ಹೊಂದಿಸಲು, ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಬೆಂಬಲ ನೀಡರುವುದು ಎದ್ದುಕಾಣುತ್ತಿತ್ತು.

ಆಂಧ್ರಪ್ರದೇಶ ಮತ್ತು ಅದರ ಕೃಷಿ ಅಗತ್ಯಗಳಿಗೆ ಪ್ರಮುಖವಾದ ದೀರ್ಘ ಕಾಲದಿಂದಲೂ ವಿಳಂಬವಾಗಿದ್ದ ಪೊಲ್ಲವರಂ ನೀರಾವರಿ ಯೋಜನೆಗೆ ಹಣ ಹಂಚಿಕೆ ಜೊತೆಗೆ ಈ ಬಾರಿಯಾದರೂ ಅದನ್ನು ಪೂರ್ಣಗೊಳಿಸಲು ಕೇಂದ್ರದ ಬದ್ಧತೆಯನ್ನು ಸೀತಾರಾಮನ್ ಪ್ರಕಟಿಸಿದರು.

ಐದು ತಿಂಗಳ ಹಂದಿನ ಫೆಬ್ರವರಿ 2024 ರಲ್ಲಿ ಅವರು 2024 ರ ಮಧ್ಯಂತರ ಬಜೆಟ್ ಅನ್ನು ಮಂಡಿಸುವಾಗ ನೀಲಿ ಸೀರೆಯನ್ನು ಧರಿಸಿದ್ದರು. ಇದು ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾದ ಕಾಂತ ಹೊಲಿಗೆಯನ್ನು (kantha stitch) ಹೊಂದಿತ್ತು.

ಸುಂದರವಾದ ಸೀರೆಯ ಮೇಲಿನ ಸಂಕೀರ್ಣವಾದ ವಿವರವು ಭಾರತೀಯ ಬಟ್ಟೆ, ವಿಶೇಷವಾಗಿ ಸೀರೆಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಸೀರೆಯ ಮೇಲಿನ ಎಲೆಯು ಬಂಗಾಳದ ಅತ್ಯಂತ ಹಳೆಯ ಕಸೂತಿ ಕೆಲಸಗಳಲ್ಲಿ ಒಂದಾಗಿದೆ.

ಬಂಗಾಳದ ನೀಲಿ ಸೀರೆಯು ಸರ್ಕಾರದ ಯೋಜನೆಗಳ ಮೇಲೆ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ಇದು ಜಲಚರಗಳ ಉತ್ಪಾದಕತೆ ಮತ್ತು ಭಾರತದ ಮೀನುಗಾರಿಕೆ ಕ್ಷೇತ್ರ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.

ಮೀನುಗಾರಿಕೆ ಇಲಾಖೆಗೆ 2024-25ನೇ ಹಣಕಾಸು ವರ್ಷಕ್ಕೆ 2,584.50 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಇದು ವಾರ್ಷಿಕ ಅತಿ ಹೆಚ್ಚು ಅನುದಾನವಾಗಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 15 % ಹೆಚ್ಚಾಗಿದೆ.

ಕಾಂತಾ ಕಸೂತಿ ಹೊಂದಿರುವ ಈ ಟಸ್ಸಾರ್ ಸೀರೆಯನ್ನು ತಯಾರಿಸಲು ಬಳಸಿದ ಬಟ್ಟೆಯ ತುಂಡುಗಳನ್ನು ಒಟ್ಟಿಗೆ ಮಾಡಿ ಹೊಲಿಯಲಾಗುತ್ತದೆ. ಸೀತಾರಾಮನ್ ಅವರು ಅಂತಹ ಸೀರೆಯನ್ನು ಧರಿಸಿರುವುದರಿಂದ, ಸ್ಥಳೀಯ ಕೈಮಗ್ಗ ಕರಕುಶಲತೆಯು ಹೆಚ್ಚು ಅಗತ್ಯವಿರುವ ಗಮನವನ್ನು ಪಡೆಯುತ್ತದೆ. ಜನರು ಕಾಂತಾ ಕಸೂತಿ ಶೈಲಿಯ ಬಗ್ಗೆ ಉತ್ತೇಜಿತರಾಗುತ್ತಾರೆ/ಕಲಿಯುತ್ತಾರೆ ಮತ್ತು ಅದು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತದೆ.

ಧಾರವಾಡದ ಇಳಕಲ್ ರೇಷ್ಮೆ ಸೀರೆ:

ಇನ್ನು 2023 ರಲ್ಲಿ, ಅವರು ದೇವಾಲಯ ಬಾರ್ಡರ್ ಸೀರೆಯನ್ನು ಆರಿಸಿಕೊಂಡಿದ್ದರು. ಅದು ಕೆಂಪು ಬಣ್ಣದ್ದಾಗಿತ್ತು. ಕರ್ನಾಟಕ ಧಾರವಾಡದ ಇಳಕಲ್ ರೇಷ್ಮೆ ಸೀರೆ ಇದಾಗಿತ್ತು. ಇದು ಕೈಯಿಂದ ನೇಯ್ದ ಕಸೂತಿ ಸೀರೆ. ಅಂದು ವಿತ್ತ ಸಚಿವೆ ಉಟ್ಟಿದ್ದ ಸೀರೆಯಲ್ಲಿ ರಥ, ನವಿಲು, ಕಮಲಗಳಿದ್ದವು.

2022 ರಲ್ಲಿ, ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಕಂದು ಬಣ್ಣದ ಬೊಮ್ಕೈ ಸೀರೆಯನ್ನು ಧರಿಸಿದ್ದರು ಮತ್ತು ಇದು ಗಂಜಾಂ ಜಿಲ್ಲೆಯ ಒಡಿಶಾದ ಕೈಮಗ್ಗಕ್ಕೆ ಸಂದ ಗೌರವವಾಗಿದೆ.

2021 ರಲ್ಲಿ, ಅವರು ಹೈದರಾಬಾದ್‌ನ ಪೋಚಂಪಲ್ಲಿ ಗ್ರಾಮದಿಂದ ಅದರ ವಿಶಿಷ್ಟ ಮಾದರಿಗಳಿಗೆ ಹೆಸರುವಾಸಿಯಾದ ಆಫ್-ವೈಟ್ ಪೋಚಂಪಲ್ಲಿ ಸೀರೆಯನ್ನು ಆರಿಸಿಕೊಂಡಿದ್ದರು.

2020 ರಲ್ಲಿ, ಅವರು ಅದೇ ಬಣ್ಣದ ಕುಪ್ಪಸದೊಂದಿಗೆ ಬಜೆಟ್ ಅನ್ನು ಪ್ರಸ್ತುತಪಡಿಸಲು ಹಳದಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹಳದಿ ಭಾರತದ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ ಮತ್ತು ಅವರ ಸೀರೆಯು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಅದರ ಸಂಪತ್ತನ್ನು ಸಂಕೇತಿಸುತ್ತದೆ.

2019 ರಲ್ಲಿ, ಸೀತಾರಾಮನ್ ಅವರು ಕೆಂಪು ಮತ್ತು ಸಮೃದ್ಧಿಯ ಸಂಕೇತವಾಗಿರುವ ಸಾಂಪ್ರದಾಯಿಕ ‘ಬಹಿ ಖಾತಾ’ ದೊಂದಿಗೆ ಬಜೆಟ್ ಬ್ರೀಫ್‌ಕೇಸ್ ಅನ್ನು ತೆಗೆದುಕೊಂಡು ಬಂದಿದ್ದರು. ಅದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನದೊಂದಿಗೆ ಚಿನ್ನದ ಎಳೆಗಳು ಇದ್ದವು. ಚಿನ್ನದ ಅಂಚಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು.

ಸೀತಾರಾಮನ್ ಆರಿಸಿಕೊಳ್ಳುತ್ತಿದ್ದ ಸುಂದರವಾದ ಆ ಸೀರೆಗಳು ಒಂದೊಂದೂ ಒಂದೊಂದು ರಾಜ್ಯವನ್ನು ಪ್ರತಿನಿಧಿಸುವಂತಹುದು. ಮತ್ತು ಆಯಾ ನಿರ್ದಿಷ್ಟ ಪ್ರದೇಶದ ವಿಶಿಷ್ಟವಾದ ಕೈಮಗ್ಗ ಮತ್ತು ಕಸೂತಿಯನ್ನು ಪ್ರತಿನಿಧಿಸುತ್ತದೆ. ಅದಕ್ಕಿಂತ ಮುಖ್ಯವಾದ ಅಂಶವೆಂದರೆ, ಬಜೆಟ್ ಮಂಡಿಸಲು ಸೀತಾರಾಮನ್ ಧರಿಸಿದ ನಂತರ ಆ ಒಂದೊಂದು ಸೀರೆಯೂ ಮಹಿಳೆಯರ ವಿಶೇಷ ಗಮನವನ್ನು ಸೆಳೆದಿದೆ.

ವರದಿಗಳ ಪ್ರಕಾರ ಸೀತಾರಾಮನ್ ಇಂದು ಧರಿಸಿದ್ದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಕಲರ್ ಸೀರೆಯು ಮಂಗಳಗಿರಿ ಸೀರೆಯಾಗಿದೆ. ಆಂಧ್ರಪ್ರದೇಶದ ಗುಂಟೂರಿನಿಂದ ಬಂದಿರುವ ಮಂಗಳಗಿರಿ ಸೀರೆಯು ವಿಶಿಷ್ಟವಾದ ಕೈಮಗ್ಗದ ಬಟ್ಟೆಯಾಗಿದ್ದು, ಅಂಚಿನಲ್ಲಿ ಝರಿ ಮತ್ತು ಬಟ್ಟೆಯ ಮೇಲೆ ನೇಯ್ದ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.

ಈ ಸೀರೆಯನ್ನು ಭೌಗೋಳಿಕ ಸೂಚನೆಗಳ (ಜಿಐ) ಕಾಯಿದೆ, 1999 ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಈ ಸೀರೆಗಳನ್ನು ಸಾಂಪ್ರದಾಯಿಕ ಪಿಟ್​​​ ಲೂಮ್‌ಗಳನ್ನು ಬಳಸಿ ತಯಾರಿಸಲಾಗುತ್ತದೆ. ಮತ್ತು ಹತ್ತಿ ಶುದ್ಧೀಕರಣ, ಡೈಯಿಂಗ್ ಮತ್ತು ನೇಯ್ಗೆಯ ನಿಖರವಾದ ಪ್ರಕ್ರಿಯೆಗೆ ಒಳಗಾಗುತ್ತದೆ. GI ಟ್ಯಾಗ್ ಈ ಸೀರೆಗಳ ದೃಢೀಕರಣ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸುತ್ತದೆ, ಅವುಗಳು ತಮ್ಮ ಸಾಂಸ್ಕೃತಿಕ ಮಹತ್ವ ಮತ್ತು ಧಾರ್ಮಿಕ ಸಂಪ್ರದಾಯದ ಬಳಕೆಗಾಗಿ ಹೆಚ್ಚು ಮೌಲ್ಯಯುತವಾಗಿವೆ.

ಈ ಹಿನ್ನೆಲೆಯಲ್ಲಿ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರ ಏಳು ಸೀರೆಗಳು ಭಾರತದ ವೈವಿಧ್ಯತೆಯನ್ನು ಪ್ರದರ್ಶಿಸುವುದಲ್ಲದೆ, ಯೋಜನೆಗಳು ಮತ್ತು ಒತ್ತು ನೀಡುವ ರಾಜ್ಯಗಳ ಬಗ್ಗೆ ಸೂಕ್ಷ್ಮವಾದ ಸುಳಿವುಗಳನ್ನು ಹೊಂದಿವೆ.

 

 

Show More

Related Articles

Leave a Reply

Your email address will not be published. Required fields are marked *

Back to top button