Bengaluru CityLatestStateTransport

ಶಕ್ತಿ ಯೋಜನೆ ಅಡಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ – ರಾಮಲಿಂಗಾರೆಡ್ಡಿ

ಸರ್ಕಾರ ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯಡಿ (Shakti Scheme) 1,413 ಕೋಟಿ ರೂ. ಬಾಕಿ ಹಣ ಕೊಡಬೇಕು ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದರು.

ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ (BJP) ಭಾರತಿ ಶೆಟ್ಟಿ ಪ್ರಶ್ನೆ ಕೇಳಿದರು. ಶಕ್ತಿ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ ಹಣ ಸರಿಯಾಗಿ ಇಟ್ಟಿಲ್ಲ. 4 ನಿಗಮಗಳಿಗೆ ಸಾರಿಗೆ 1,413 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ‌. ಇದರಿಂದ ಸಾರಿಗೆ ಸಂಸ್ಥೆಗಳಿಗೆ ಸಮಸ್ಯೆ ಆಗುತ್ತಿದೆ ಅಂತ ಪ್ರಶ್ನೆ ಕೇಳಿದ್ರು.

ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿ, ‌ಸರ್ಕಾರದಿಂದ ಸಾರಿಗೆ ಇಲಾಖೆಗೆ (Transport Department) 1,413 ಕೋಟಿ ರೂ. ಶಕ್ತಿ ಹಣ ಬಾಕಿ ಇದೆ. ಶಕ್ತಿ ಯೋಜನೆ ಪ್ರಾರಂಭ ಆದಾಗ ನಿತ್ಯ 80 ಲಕ್ಷ ಜನ ಸಂಚಾರ ಮಾಡ್ತಿದ್ದರು ‌‌ಹೀಗಾಗಿ ಮೊದಲು 3,200 ಕೋಟಿ ರೂ. ಶಕ್ತಿಗೆ ಅನುದಾನ ಇಡಲಾಗಿತ್ತು. ಶಕ್ತಿ ಯೋಜನೆ ಪ್ರಾರಂಭ ಮಾಡಿದ ನಂತರ 1 ಕೋಟಿ ನಿತ್ಯ ಒಡಾಟ ಆಯ್ತು. ಹೀಗಾಗಿ ಹಣದ ಹೆಚ್ಚುವರಿಯಾಗಿ ನೀಡಲು ಆಗಿಲ್ಲ. ಬಜೆಟ್ ನಲ್ಲಿ 5,015 ಕೋಟಿ ರೂ. ಇಡಲಾಗಿದೆ. ಸರ್ಕಾರದಿಂದ 1,413.47 ಕೋಟಿ ರೂ. ಬಾಕಿ ಇದೆ‌. ಹಣ ಬಿಡುಗಡೆ ಮಾಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಹಣ ಬಿಡುಗಡೆ ಮಾಡಿದ ಮೇಲೆ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡೋದಾಗಿ ತಿಳಿಸಿದರು.

ಇದರೊಂದಿಗೆ ಹೊಸ ಬಸ್ ಖರೀದಿಗೆ ಸಿಎಂ 600 ಕೋಟಿ ರೂ. ಕೊಟ್ಟಿದ್ದಾರೆ. ಮೋಟಾರ್ ಟ್ಯಾಕ್ಸ್ 580 ಕೋಟಿ ರೂ. ಸಿಎಂ ರಿಯಾಯ್ತಿ ಕೊಟ್ಡಿದ್ದಾರೆ ಎಂದರು. ಬಿಎಂಟಿಸಿಗೆ ಲಾಭ ಬರ್ತಿದೆ. ಆದರೆ ಟಿಕೆಟ್ ದರ 10 ವರ್ಷಗಳಿಂದ ಏರಿಕೆ ಮಾಡಿಲ್ಲ. ಹೀಗಾಗಿ ಲಾಭ ಬಂದರೂ ಡಿಸೇಲ್ ಸೇರಿ ಹಲವು ಖರ್ಚಿಗೆ ಹಣ ವ್ಯಯವಾಗುತ್ತಿದೆ ಅಂತ ತಿಳಿಸಿದರು.

KSRTC- 556.60 ಕೋಟಿ ರೂ.
BMTC- 228.95 ಕೋಟಿ ರೂ.
ವಾಯುವ್ಯ ಸಾರಿಗೆ – 333.09 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ – 294.83 ಕೋಟಿ ರೂ.
ಒಟ್ಟು ಬಾಕಿ – 1413.47 ಕೋಟಿ ರೂ.

Show More

Related Articles

Leave a Reply

Your email address will not be published. Required fields are marked *

Back to top button