CinemaLatest

ಹಠ ಮಾಡುತ್ತಿದ್ದ ಮೊಮ್ಮಗನ ಶಾಲೆಗೆ ಬಿಟ್ಟ ರಜನಿಕಾಂತ್; ಸೂಪರ್​ ಸ್ಟಾರ್​ನ ನೋಡಿ ಮಕ್ಕಳೆಲ್ಲ ಶಾಕ್…

ಐಶ್ವರ್ಯಾ ಅವರು ಎರಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಜನಿಕಾಂತ್ ಮೊಮ್ಮೊಗ ಲಿಂಗರಾಜ ಜೊತೆ ರಜನಿ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ರಜನಿಕಾಂತ್ ಶಾಲಾ ಕೊಠಡಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ರಜನಿಕಾಂತ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಕಾಲ್​ಶೀಟ್​ಗಾಗಿ ಅನೇಕ ನಿರ್ಮಾಪಕರು ಕಾದು ಕುಳಿತಿದ್ದಾರೆ. ಅನೇಕ ನಿರ್ದೇಶಕರು ಬಂದು ಕಥೆ ಹೇಳಿ ಅವರನ್ನು ಒಪ್ಪಿಸಲಾಗದೆ ಸೋತಿದ್ದಾರೆ. ಅವರ ಆಸ್ತಿ ಬಗ್ಗೆ ಅಂತೂ ಕೇಳೋದೇ ಬೇಡ. ಇಷ್ಟೆಲ್ಲ ಇದ್ದರೂ ರಜನಿಕಾಂತ್ ಮಾತ್ರ ಸಿಂಪಲ್ ಆಗಿ ಇರೋಕೆ ಪ್ರಯತ್ನಿಸುತ್ತರೆ. ಇದಕ್ಕೆ ಹೊಸ ಉದಾಹರಣೆ ಒಂದು ಸಿಕ್ಕಿದೆ. ಶಾಲೆಗೆ ಹೋಗಲ್ಲ ಎಂದು ಮನೆಯಲ್ಲಿ ಹಠ ಮಾಡುತ್ತಿದ್ದ ಮೊಮ್ಮಗನನ್ನು ಸ್ವತಃ ರಜನಿಕಾಂತ್ ಅವರೇ ಶಾಲೆಗೆ ಬಿಟ್ಟು ಬಂದಿದ್ದಾರೆ. ಈ ವಿಚಾರವನ್ನು ರಜನಿಕಾಂತ್ ಮಗಳು ಐಶ್ವರ್ಯಾ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ಅವರು ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಜನಿಕಾಂತ್ ಮೊಮ್ಮೊಗ ಲಿಂಗ ರಾಜ ಜೊತೆ ರಜನಿ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ರಜನಿಕಾಂತ್ ಶಾಲಾ ಕೊಠಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರನ್ನು ನೋಡಿ ಶಾಲಾ ಮಕ್ಕಳು ಸಖತ್ ಎಗ್ಸೈಟ್ ಆಗಿದ್ದಾರೆ. ಅದರಲ್ಲೂ ಕೊನೆಯಲ್ಲಿ ಕುಳಿತ ಬಾಲಕಿ ಖುಷಿ ತಡೆಯಲಾರದೆ ಎರಡೂ ಕೈಯನ್ನು ಮುಖದಮೇಲೆ ಇಟ್ಟಿದ್ದಾಳೆ.

 

‘ನನ್ನ ಮಗನಿಗೆ ಇಂದು ಶಾಲೆಗೆ ಹೋಗಲು ಮನಸ್ಸೇ ಇರಲಿಲ್ಲ. ಸೂಪರ್ ಹೀರೋ ಥಾಲಾ ಅವನನ್ನು ಶಾಲೆಗೆ ಕರೆದುಕೊಂಡು ಹೋದರು. ನೀವು ನಿಭಾಯಿಸಿದ ಪ್ರತಿ ಪಾತ್ರವೂ ಉತ್ತಮವಾಗಿದೆ. ಆಫ್ ಸ್ಕ್ರೀನ್​ನಲ್ಲಿ ನೀವು ನನ್ನ ಪ್ರೀತಿಯ ತಂದೆ’ ಎಂದು ಸೌಂದರ್ಯ ರಜನಿಕಾಂತ್ ಬರೆದುಕೊಂಡಿದ್ದಾರೆ.

ಈ ಫೋಟೋಗೆ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ರಜನಿಕಾಂತ್ ಅವರ ಸರಳತೆಯನ್ನು ಹೊಗಳಿದ್ದಾರೆ. ಇನ್ನೂ ಕೆಲವರು ಈ ಫೋಟೋ ಹಂಚಿಕೊಂಡ ಸೌಂದರ್ಯಾಗೆ ಧನ್ಯವಾದ ಹೇಳಿದ್ದಾರೆ. ಇನ್ನೂ ಕೆಲವರು ರಜನಿಕಾಂತ್ ಅವರ ದರ್ಶನ ಸಿಕ್ಕಿ ಖುಷಿಯಾದ ಮಕ್ಕಳ ಬಗ್ಗೆ ಬರೆದುಕೊಂಡಿದ್ದಾರೆ.

 

Show More

Related Articles

Leave a Reply

Your email address will not be published. Required fields are marked *

Back to top button