
ನಾಗ ಚೈತನ್ಯ ಹಾಗೂ ಸಮಂತಾ ಅವರದ್ದು ಮುಗಿದು ಹೋದ ಕಥೆ. ಇಬ್ಬರೂ ದೂರ ಆಗಿ ಕೆಲವು ವರ್ಷಗಳು ಕಳೆದಿವೆ. ಹೀಗಿರುವಾಗಲೇ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವರಿಸಲು ಸಿದ್ಧರಾಗಿದ್ದಾರೆ ಎಂದು ವರದಿ ಆಗಿತ್ತು. ಇದು ಈಗ ನಿಜವಾಗಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಪ್ರೀತಿಯಲ್ಲಿ ಇರೋ ವಿಚಾರ ಈಗ ಅಧಿಕೃತ ಆಗಿದೆ. ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಕ್ಕಿನೇನಿ ನಾಗಾರ್ಜುನ ಅವರ ಬಲಕ್ಕೆ ಶೋಭಿತಾ ಹಾಗೂ ಎಡಕ್ಕೆ ನಾಗ ಚೈತನ್ಯ ಇದ್ದಾರೆ. ನಾಗ ಚೈತನ್ಯ ಅವರ ನಿವಾಸದಲ್ಲೇ ನಿಶ್ಚಿತಾರ್ಥ ನಡೆದಿದೆ. ಸಮಂತಾ ಪ್ರತಿಕ್ರಿಯೆ ಹೇಗೆ ಇರುತ್ತದೆ ಎನ್ನುವ ಕುತೂಹಲ ಮೂಡಿದೆ.
ಸಮಂತಾ ಹಾಗೂ ನಾಗ ಚೈತನ್ಯ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದರು. 2017ರಲ್ಲಿ ಅದ್ದೂರಿಯಾಗಿ ಇವರ ವಿವಾಹ ನೆರವೇರಿತು. ನಾಲ್ಕೇ ವರ್ಷಕ್ಕೆ ಇವರ ಸಂಬಂಧ ಕೊನೆ ಆಯಿತು. 2021ರ ಅಕ್ಟೋಬರ್ನಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ದೂರ ಆದರು. ಈಗ ನಾಗ ಚೈತನ್ಯ ಬೇರೆ ನಟಿಯ ಜೊತೆ ಹೊಸ ಬಾಳು ಆರಂಭಿಸುತ್ತಿದ್ದಾರೆ.
ನಾಗ ಚೈತನ್ಯ ಮನೆಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಈ ನಿಶ್ಚಿತಾರ್ಥದಿಂದ ಖುಷಿ ಆಗಿದ್ದಾರೆ. ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ನಿಶ್ಚಿತಾರ್ಥದ ಮತ್ತಷ್ಟು ಫೋಟೋಗಳು ಶೀಘ್ರವೇ ಹೊರ ಬೀಳೋ ಸಾಧ್ಯತೆ ಇದೆ.
ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿರೋ ಶೋಭಿತಾ ಅವರು ಈವರೆಗೆ ನಾಗ ಚೈತನ್ಯ ಜೊತೆ ತೆರೆ ಹಂಚಿಕೊಂಡಿಲ್ಲ. ಆದಾಗ್ಯೂ ಇಬ್ಬರ ಮಧ್ಯೆ ಹೇಗೆ ಪ್ರೀತಿ ಮೂಡಿತು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಶೋಭಿತಾ ಹಾಗೂ ನಾಗ ಚೈತನ್ಯ ಅವರನ್ನು ಫ್ಯಾನ್ಸ್ ಶಫಿಸುತ್ತಿದ್ದಾರೆ. ಈ ಬಗ್ಗೆ ಸಮಂತಾ ಅವರ ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.