Heavy RainLatestTransport

ಬೆಂಗಳೂರು: ಭಾರಿ ಮಳೆಯ ಮುನ್ಸೂಚನೆ, ವರ್ಕ್ ಫ್ರಂ ಹೋಮ್ ನೀಡುವಂತೆ ಕಂಪನಿಗಳಿಗೆ ಪೊಲೀಸರ ಮನವಿ!

ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಇದೆ. ಈ ಮಧ್ಯೆ, ದೀರ್ಘ ವಾರಾಂತ್ಯವೂ ಬರುತ್ತಿದೆ. ಈ ಎಲ್ಲ ಕಾರಣಗಳಿಂದ ಔಟರ್ ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದ್ದು, ಸುಗಮ ಸಂಚಾರ ನಿರ್ವಹಣೆ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂ ನೀಡುವಂತೆ ಕಂಪನಿಗಳಿಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

 

ಬೆಂಗಳೂರು, ಆಗಸ್ಟ್ 14: ಬೆಂಗಳೂರು ನಗರದಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಔಟರ್ ​​ರಿಂಗ್ ರಸ್ತೆಯ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ (ಮನೆಯಿಂದಲೇ ಕೆಲಸ) ಅವಕಾಶ ನೀಡುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಮಳೆಯಿಂದ ಆಗಬಹುದಾದ ಅವಾಂತರ ತಪ್ಪಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಇಂದು ಸಿಬ್ಬಂದಿಗೆ ವರ್ಕ್ ಫ್ರಮ್ ಹೊಮ್ ನೀಡುವಂತೆ ಸಂಚಾರಿ ಜಂಟಿ ಆಯುಕ್ತ ಎಂಎನ್ ಅನುಚೇತ್ ಮನವಿ ಮಾಡಿದ್ದಾರೆ. ದೀರ್ಘ ವಾರಾಂತ್ಯದ ಜೊತೆಗೆ ನಿರೀಕ್ಷಿತ ಭಾರೀ ಮಳೆ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್ 14ರಂದು ಭಾರೀ ಸಂಚಾರ ದಟ್ಟಣೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಅನಗತ್ಯ ವಿಳಂಬಗಳನ್ನು ತಪ್ಪಿಸಲು 14ರಂದು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು (WFH) ಸೂಚಿಸಬೇಕು ಎಂದು ಅನುಚೇತ್ ಮನವಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರಯಾಣಿಸಬೇಕಾದ ಎಲ್ಲರಿಗೂ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ ವಿಷಯದಲ್ಲಿ ನಿಮ್ಮ ಸಹಕಾರವನ್ನು ನಾವು ಪ್ರಶಂಸಿಸುತ್ತೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಿಸುವಲ್ಲಿ ನಿಮ್ಮ ಬೆಂಬಲ ಅಗತ್ಯ ಎಂದು ಪತ್ರ ಮುಖೇನ ಅನುಚೇತ್ ಮನವಿ ಮಾಡಿದ್ದಾರೆ.

ದೀರ್ಘ ವಾರಾಂತ್ಯ

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಂಪನಿಗಳಿಗೆ ರಜೆ ಇದೆ. ಶುಕ್ರವಾರ ಒಂದು ದಿನ ರಜೆ ಮಾಡಿದರಂತೂ ನಾಲ್ಕು ದಿನ ರಜೆ ಸಿಗಲಿದೆ. ಹೀಗಾಗಿ ಇಂದು (ಆಗಸ್ಟ್ 14) ಕಚೇರಿಯಿಂದ ಮನೆಗೆ ತೆರಳುವವರು, ನಂತರ ಊರಿಗೆ ತೆರಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿರಲಿದೆ. ಪರಿಣಾಮವಾಗಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಅದರಲ್ಲಿಯೂ ಔಟರ್ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ವಿಪರೀತ ಹೆಚ್ಚಾಗುವ ಸಾಧ್ಯತೆ ಇದೆ.

ಮಳೆ ಬಂದರಂತೂ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಸಂಚಾರ ಪೊಲೀಸರು ಔಟರ್ ರಿಂಗ್ ರಸ್ತೆಯ ವ್ಯಾಪ್ತಿಯ ಕಂಪನಿಗಳಿಗೆ ಮನವಿ ಮಾಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button