
ರಾಜ್ಯಾಧ್ಯಂತ ಎಲ್ಲಾ ಮಾದರಿಯ ‘ಟ್ಯಾಕ್ಸಿ ಪ್ರಯಾಣ ದರ’ ಒಂದೇ ಮಾದರಿಯಲ್ಲಿ ನಿಗದಿ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ರಾಜ್ಯದ ಎಲ್ಲಾ ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ, ಪ್ರಾದೇಶಿಕ, ಸಹಾಯಕ ಪ್ರಾದೇಶಿಕ, ಸಾರಿಗೆ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಸಾರಿಗೆ ಇಲಾಖೆಯ ಆಯುಕ್ತರು ಹೊರಡಿಸಿರುವಂತ ಆದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ನಗರ ಮಿತಿಯೊಳಗೆ ಆಚರಣೆ ಮಾಡುವ ಎಲ್ಲಾ ಟ್ಯಾಕ್ಸಿ ಸೇವೆಗಳಿಗೆ “ಒಂದು ನಗರ ಒಂದು ದರ” ನೀತಿಯನ್ನು ಅನುಷ್ಠಾಗೊಳಿಸುವಂತೆ ಪತ್ರದಲ್ಲಿ President, Federation of Karnataka State Private Transport Associations, Bangalore ಇವರು ಕೋರಿರುತ್ತಾರೆ ಎಂದಿದ್ದಾರೆ.
ಪರಿಶೀಲಿಸಲಾಗಿ, ಈಗಾಗಲೇ ಸರ್ಕಾರವು ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗಧಿಪಡಿದಿಸಿ ಆದೇಶಿಸಿದ್ದು ಅದರಂತೆ ಈ ಕಛೇರಿ ಪತ್ರದಲ್ಲಿ ಸರ್ಕಾರದ ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಸಂಬಂಧಿಸಿದ ನಿರ್ದೇಶನಗಳಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಕಛೇರಿಯ ಸೂಚನಾ ಫಲಕಗಳಲ್ಲಿ ಪುದರ್ಶಿಸಲು ಸೂಚಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಆದ್ದರಿಂದ ಸರ್ಕಾರವು ಪರಿಷ್ಕರಿಸಿರುವ ಪರಿಷ್ಕೃತ ದರಗಳನ್ನು ಕರ್ನಾಟಕ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳು ಪರಿಷ್ಕೃತ ದರಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಹೀಗಿದೆ ಟ್ಯಾಕ್ಸಿ ದರಗಳು
- 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ವಾಹನಗಳಿಗೆ ಕನಿಷ್ಟ 4 ಕಿಲೋಮೀಟರ್ ವರೆಗೆ ರೂ.100, ಪ್ರತಿ ಕಿಲೋಮೀಟರ್ ಗೆ ರೂ.24
- 10 ಲಕ್ಷದಿಂದ 15 ಲಕ್ಷದವರೆಗಿನ ಮೌಲ್ಯದ ವಾಹನಗಳಿಗೆ ಕನಿಷ್ಟ 4 ಕಿಲೋಮೀಟರ್ ವರೆಗೆ ರೂ.115, ಆನಂತ್ರ ಪ್ರತಿ ಕಿಲೋಮೀಟರ್ ಗೆ ರೂ.28
- 15 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಟ್ಯಾಕ್ಸಿ ವಾಹನಗಳಿಗೆ 4 ಕಿಮೀ ವರೆಗೆ ರೂ.130, ಆನಂತ್ರ ಪ್ರತಿ ಕಿಲೋಮೀಟರ್ ಗೆ ರೂ.32 ದರವನ್ನು ರಾಜ್ಯ ಸರ್ಕಾರ ನಿಗದಿ ಪಡಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು