
ಬೆಂಗಳೂರಿನ ಆಟೋ ಚಾಲಕರಿಗೆ ಸಾರಿಗೆ ಇಲಾಖೆ ಮಹತ್ವದ ಅಪ್ಡೇಟ್ಸ್ವೊಂದನ್ನು ನೀಡಿದೆ. ಅಲ್ಲದೇ ಈ ನಿರ್ದಿಷ್ಟ ನಿಯಮ ಉಲ್ಲಂಘನೆ ಮಾಡುತ್ತಿರುವ ಆಟೋ ಚಾಲಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ನಂಬರ್ ಪ್ಲೇಟ್ನಲ್ಲಿ ಈ ತಪ್ಪು ನಡೆಯುತ್ತಿದೆ. ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪು ಕಂಡು ಬಂದರೆ ಕ್ರಮ ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ. ಆಟೋ ನಂಬರ್ನಲ್ಲಿ ಈ ತಪ್ಪು ನಡೆಯುತ್ತಿರುವ ಬಗ್ಗೆ ಬೆಂಗಳೂರಿನ ಜಂಟಿ ಸಾರಿಗೆ ಆಯುಕ್ತರಿಗೆ ದೂರು ಸಹ ನೀಡಲಾಗಿದೆ.
ಬೆಂಗಳೂರಿನಲ್ಲಿ ಹಳದಿ ಬಣ್ಣದ ಹಳೆಯ ಆಟೋಗಳಿಗೆ 3EV ಎಂದು ಹೆಸರು ನಾಮಕರಣ ಮಾಡಲಾಗುತ್ತಿದೆ. ಅಲ್ಲದೇ ಹಲವು Rtoಗಳಲ್ಲೇ ಹಸಿರು ಬಣ್ಣದ ನಂಬರ್ ಪ್ಲೇಟ್ಗೆ ಹಳದಿ ಬಣ್ಣದ ನಂಬರ್ ಕೊಟ್ಟು ರಿಜಿಸ್ಟರ್ ಮಾಡಲಾಗುತ್ತಿರುವುದು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಚಾಲಕರ ಪರಿಷತ್ನ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ್ ಕೆ ಹಾಗೂ ಇತರರು ದೂರು ದಾಖಲಿಸಿದ್ದಾರೆ.
ಈ ರೀತಿ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆಯು ಸಂಬಂಧಪಟ್ಟ ವಿಷಯದ ಬಗ್ಗೆ ತನಿಖೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಹಳದಿ ಬಣ್ಣದ ಹಳೆಯ ಆಟೋಗಳಿಗೆ 3EV ಎಂದು ಹೆಸರು ಬದಲಾಯಿಸಲಾಗುತ್ತಿದ್ದು. ಅಲ್ಲದೇ ನಗರದ ಹಲವು ಆರ್ಟಿಒಗಳಲ್ಲೇ ಹಸಿರು ಬಣ್ಣದ ನಂಬರ್ ಪ್ಲೇಟ್ಗೆ ಹಳದಿ ಬಣ್ಣದ ನಂಬರ್ ಪ್ಲೇಟ್ ಕೊಟ್ಟು ರಿಜಿಸ್ಟ್ರೇಷನ್ ಮಾಡಿಸುತ್ತಿರುವ ಬಗ್ಗೆ ದೂರು ಬಂದಿದೆ.
ಯಾವ ವಾಹನ ಸಂಖ್ಯೆ ಹಾಗೂ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ ಎನ್ನುವ ವಿವರವನ್ನೂ ಆಟೋ ಸಂಘಟನೆ ನೀಡಿದೆ. ಅಲ್ಲದೇ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆಯೂ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತ (ಹೆಚ್ಚುವರಿ) ಅವರು ಆರ್ಟಿಒ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಮಗ್ರ ತನಿಖೆಗೆ ಆದೇಶ
ಬೆಂಗಳೂರಿನಲ್ಲಿ ಆಟೋಗಳ ನಂಬರ್ ಪ್ಲೇಟ್ ಹಾಗೂ ಬಣ್ಣದಲ್ಲಿ ಆಗುತ್ತಿರುವ ಮೋಸದ ಬಗ್ಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಈ ರೀತಿಯ ದೂರಿನ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಈ ರೀತಿ ತಪ್ಪು ಮಾಡುತ್ತಿರುವ ಆಟೋ ಚಾಲಕರು ಹಾಗೂ ಆರ್ಟಿಒ ಅಧಿಕಾರಿಗಳು ಇಬ್ಬರಿಗೂ ಏಕಕಾಲಕ್ಕೆ ಸಮಸ್ಯೆ ಎದುರಾಗಿದೆ.
ಈ ದೂರಿನ ತನಿಖೆ ನಡೆದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿದರೆ. ಆರ್ಟಿಒ ಅಧಿಕಾರಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಆಟೋ ಚಾಲಕರ ಡ್ರೈವಿಂಗ್ ಲೈಸನ್ಸ್ ರದ್ದು ಅಥವಾ ನಿಯಮಾನುಸಾರ ಕ್ರಮವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ನಂಬರ್ಪ್ಲೇಟ್ನಲ್ಲಿ ಹಲವು ವಿಧಗಳಿವೆ. ಹಸಿರು ಹಾಗೂ ಹಳದಿ ಬಣ್ಣದ ನಂಬರ್ ಪ್ಲೇಟ್ಗೆ ಕೆಲವು ನಿರ್ದಿಷ್ಟ ನಿಯಮಗಳು ಇವೆ. ಆದರೆ, ಕೆಲವು ಆಟೋ ಚಾಲಕರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಅವರಿಗೆ ಬೇಕಾದಂತೆ ನಂಬರ್ ಪ್ಲೇಟ್ ಹಾಗೂ ಬಣ್ಣ ಬದಲಾಯಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿವಿಧ ಆಟೋ ಚಾಲಕರ ಸಂಘ ಅಭಿಯಾನ ಪ್ರಾರಂಭಿಸಿದ್ದದಾರೆ.