NationalTransport

ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಹಿತಿ ಹಂಚಿಕೊಂಡ ಹೋಂಡಾ

Honda has shared information about the launch of the first electric scooter in India

ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಸುಳಿವು ನೀಡಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಹಿತಿ ಹಂಚಿಕೊಂಡ ಹೋಂಡಾ
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಹಿತಿ ಹಂಚಿಕೊಂಡ ಹೋಂಡಾ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಹೋಂಡಾ ಮೋಟಾರ್ ಸೈಕಲ್ ಇಂಡಿಯಾ (honda motorcycles india) ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಪರಿಚಯಿಸುವ ಸಿದ್ದತೆ ನಡೆಸಿದೆ. ಹೊಸ ಇವಿ ಸ್ಕೂಟರ್ ಮಾದರಿಯನ್ನು ಪೆಟ್ರೋಲ್ ಸ್ಕೂಟರ್ ಬೆಲೆಯಲ್ಲಿ ಅತ್ಯುತ್ತಮ ತಂತ್ರಜ್ಞಾನ ಮತ್ತು ಹೆಚ್ಚಿನ ಮೈಲೇಜ್ ನೊಂದಿಗೆ ಅಭಿವೃದ್ದಿಪಡಿಸುತ್ತಿದ್ದು, ಇದು ಬಹುಬೇಡಿಕೆಯ ಇವಿ ಸ್ಕೂಟರ್ ಆಗುವ ನೀರಿಕ್ಷೆಯಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ದ್ವಿಚಕ್ರ ವಾಹನಗಳ ಕಂಪನಿಗಳು ತಮ್ಮ ವಿನೂತನ ಇವಿ ಆವೃತ್ತಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಇವಿ ಸ್ಕೂಟರ್ ಬಿಡುಗಡೆಗಾಗಿ ಹೋಂಡಾ ಕಂಪನಿಯ ಮೇಲೂ ಸಾಕಷ್ಟು ಒತ್ತಡ ಸೃಷ್ಠಿಯಾಗುತ್ತಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯ ಹೊರತಾಗಿಯೂ ಇವಿ ಸ್ಕೂಟರ್ ಬಿಡುಗಡೆ ಯೋಜನೆಯನ್ನು ಮುಂದೂಡತ್ತಲೇ ಬಂದಿದ್ದ ಹೋಂಡಾ ಕಂಪನಿ ಇದೀಗ ಹೊಸ ಇವಿ ಉತ್ಪನ್ನ ಬಿಡುಗಡೆಗೆ ಕೊನೆಗೂ ಸಮಯ ನಿಗದಿಪಡಿಸಿದೆ.

ಇವಿ ವಾಹನಗಳ ಅಗತ್ಯವಾಗಿರುವ ಚಾರ್ಜಿಂಗ್ ಸೌಲಭ್ಯದ ಕೊರತೆ ಮತ್ತು ಇವಿ ವಾಹನಗಳ ತಂತ್ರಜ್ಞಾನದಲ್ಲಿ ಎದುರಾಗುತ್ತಿರುವ ಹೊಸ ಹೊಸ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಹೋಂಡಾ ಕಂಪನಿಯು ತನ್ನ ಇವಿ ಸ್ಕೂಟರ್ ಉತ್ಪನ್ನಗಳನ್ನು ಸಾಕಷ್ಟು ಸುಧಾರಿತ ತಂತ್ರಜ್ಞಾನದೊಂದಿಗೆ ಬಿಡುಗಡೆಗಾಗಿ ಅಣಿಗೊಳಿಸುತ್ತಿದೆ. ಹೀಗಾಗಿ ಮುಂಬರುವ 2025ರ ಮಾರ್ಚ್ ವೇಳೆಗೆ ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ ಎಂದು ಹೋಂಡಾ ದೃಢಪಡಿಸಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ, ಸಿಇಒ ಮತ್ತು ಎಂಡಿ ಸುತ್ಸುಮು ಒಟಾನಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೊಸ ಇವಿ ಸ್ಕೂಟರ್ ಬಿಡುಗಡೆಯ ಕುರಿತಾಗಿ ಖಚಿತಪಡಿಸಿದ್ದು, ಹೊಸ ಇವಿ ಸ್ಕೂಟರ್‌ನ ಉತ್ಪಾದನೆಯನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಆರಂಭಿಸುವ ಸುಳಿವು ನೀಡಿದ್ದಾರೆ.

ಮತ್ತೊಂದು ವಿಶೇಷವೆಂದರೆ, ಹೋಂಡಾ ಕಂಪನಿಯು ತನ್ನ ಇವಿ ಸ್ಕೂಟರ್ ಅನ್ನು ಕರ್ನಾಟಕದಲ್ಲಿರುವ ನರಸಾಪುರ ಪ್ಲ್ಯಾಂಟ್ ನಲ್ಲಿ ನಿರ್ಮಾಣ ಮಾಡಲಿದ್ದು, ಸಾಮಾನ್ಯ ಪೆಟ್ರೋಲ್ ದ್ವಿಚಕ್ರ ವಾಹನಗಳಿಗೆ ಮೀಸಲಾದ ಅಸೆಂಬ್ಲಿ ಲೈನ್‌ನಲ್ಲಿಯೇ ಹೊಸ ಇವಿ ಸ್ಕೂಟರ್ ಉತ್ಪಾದಿಸಲು ಯೋಜನೆ ರೂಪಿಸಿದೆ.

ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ತಾಂತ್ರಿಕ ವಿವರಗಳು ತಿಳಿದಿಲ್ಲವಾದರೂ ಇದನ್ನು ಕಂಪನಿಯು ಆಕ್ಟಿವಾ ಎಲೆಕ್ಟ್ರಿಕ್ ಎಂದು ಕರೆಯಬಹುದು ಎಂದು ಹೇಳಲಾಗುತ್ತಿದೆ. ಈ ಮೂಲಕ ಇದು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಗಳ ಜೊತೆಗೆ ಬ್ಯಾಟರಿ-ಸ್ವಾಪಿಂಗ್ ತಂತ್ರಜ್ಞಾನವನ್ನು ಹೊಂದುವ ಸಾಧ್ಯತೆಗಳಿದ್ದು, ಇದು ಪ್ರತಿ ಚಾರ್ಜ್ ಗೆ 120 ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ನೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1 ಲಕ್ಷದಿಂದ ರೂ. 30 ಲಕ್ಷದ ತನಕ ಬೆಲೆ ಹೊಂದಿರಬಹುದಾಗಿದೆ.

ಈ ಮೂಲಕ ಹೊಸ ಹೋಂಡಾ ಇವಿ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಚೇತಕ್ ಇವಿ, ಟಿವಿಎಸ್ ಐಕ್ಯೂಬ್, ಹೀರೋ ವಿಡಾ ವಿ1 ಸೇರಿದಂತೆ ತಂತ್ರಜ್ಞಾನದಲ್ಲಿ ಜನಪ್ರಿಯವಾಗಿರುವ ಓಲಾ ಎಲೆಕ್ಟ್ರಿಕ್ ಮತ್ತು ಅಥರ್ ಎನರ್ಜಿಯಂತಹ ಸ್ಟಾರ್ಟ್‌ಅಪ್‌ ಕಂಪನಿಗಳ ಇವಿ ಸ್ಕೂಟರ್ ಮಾದರಿಗಳು ಹೋಂಡಾ ಇ-ಸ್ಕೂಟರ್‌ಗೆ ಕಠಿಣ ಸವಾಲನ್ನು ಒಡ್ಡುವ ಸಾಧ್ಯತೆಗಳಿವೆ.

Show More

Related Articles

Leave a Reply

Your email address will not be published. Required fields are marked *

Back to top button