
ಸಂಧ್ಯಾಳ ಸಾವಿಗೆ ಕಾರಣವಾದ ಧನುಷ್ ಹಿನ್ನೆಲೆ ಏನು? ಈತ ಕೋಟ್ಯಾಧಿಪತಿಯ ಮಗ
ದಾರುಣ, ನಿಜಕ್ಕೂ ಈ ಸಾವು ಘೋರ. ತಪ್ಪೇ ಮಾಡದೇ ಮಸಣ ಸೇರಿದ್ದು ನಿಜಕ್ಕೂ ಘೋರ. ವೇರಿ ಟ್ಯಾಲೆಂಟೆಡ್, ಅದ್ಭುತ ಕಂಠ ಹೊಂದಿದ್ದ ಸಂಧ್ಯಾ ಮತ್ಯಾರದ್ದೋ ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟಿದ್ದಾಳೆ. ಇದೀಗ ಸಂಧ್ಯಾಳ ಸಾವಿಗೆ ನ್ಯಾಯ ಸಿಗುತ್ತೋ? ಇಲ್ಲವೋ? ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಕೆಂಗೇರಿ ಬಸ್ ನಿಲ್ದಾಣದ ಆ ಒಂದು ಜಾಗದಲ್ಲೇ ಸಂಧ್ಯಾ ದಾರುಣವಾಗಿ ಅಪಘಾತಕ್ಕೆ ಬಲಿ ಆಗಿದ್ದಾಳೆ. ಆ ಕ್ಷಣ ಟ್ರಾಫಿಕ್ ಪೊಲೀಸರು ನಡೆದುಕೊಂಡ ರೀತಿ ಜನರನ್ನ ಆಕ್ರೋಶಕ್ಕೆ ದೂಡಿತ್ತು. ನಿಜಕ್ಕೂ ಈ ಕೊಲೆಗಾರನ ಜೊತೆ ಪೊಲೀಸರು ಶಾಮೀಲಾಗಿದ್ದಾರಾ? ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ಜನಾಕ್ರೋಶದ ಬಳಿಕ ಆರೋಪಿ ಧನುಷ್ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇನ್ನು ಮೃತ ಸಂಧ್ಯಾಳ ಕುಟುಂಬಕ್ಕೆ ಆರೋಪಿ ಧನುಷ್ ತಂದೆ ಒಂದೂವರೆ ಕೋಟಿ ಮೊತ್ತ ಬಿಗ್ ಆಫರ್ ನೀಡಿದ್ರಂತೆ. ಹಾಗಾದ್ರೆ ಆರೋಪಿ ಧನುಷ್ನ ತಂದೆ ಯಾರು.. ಅವರ ಹಿನ್ನೆಲೆ ಏನು ಅಂತ ನೋಡೋದಾದ್ರೆ.
ಆರೋಪಿ ಧನುಷ್ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುದು ಗೊತ್ತಾಗಿದೆ. ಎಲ್ವಿ ಟ್ರಾವೆಲ್ಸ್ ಮಾಲೀಕ ಪರಮಶಿವಯ್ಯರ ಏಕೈಕ ಪುತ್ರ ಆಗಿದ್ದು ಪ್ರೀತಿಯಿಂದ ಬೆಳೆಸಿದ್ದಾರೆ. ಸದ್ಯ ಆರೋಪಿ ಧನುಷ್ ಬಂಧಿಸಿ ಜೈಲಿಗೆ ಕಳುಹಿಸಿರೋ ಪೊಲೀಸರು. ಧನುಷ್ ತಂದೆ ಪರಮಶಿವಯ್ಯ ಮೂಲತಃ ಮಾಗಡಿಯ ಅಶೆಟ್ಟ ಹಳ್ಳಿಯವರು, 20 ವರ್ಷಗಳಿಂದ ಪಾಪರೆಡ್ಡಿಪಾಳ್ಯದಲ್ಲಿ ಪರಮಶಿವಯ್ಯ ವಾಸ ಮಾಡ್ತಿದ್ದಾರೆ. 9 ವರ್ಷಗಳ ಕಾಲ ಎಸ್ಆರ್ಎಸ್ ಟ್ರಾವಲ್ಸ್ನಲ್ಲಿ ಪರಮಶಿವಯ್ಯ ಕೆಲಸ ಮಾಡ್ತಿದ್ದರು. 2015ರಲ್ಲಿ ಎಲ್ವಿ ಟ್ರಾವೆಲ್ಸ್ ಶುರು ಮಾಡಿದ್ದ ಪರಮಶಿವಯ್ಯ, ಎಲ್ವಿ ಟ್ರಾವೆಲ್ಸ್ನಿಂದ ಕೋಟ್ಯಾಂತರ ರೂ ಸಂಪಾದನೆ ಮಾಡಿದ್ದರು ಪುತ್ರನ ಮೇಲಿದ್ದ ಅತಿಯಾದ ಪ್ರೀತಿಯಿಂದ ಕೇಸ್ ಮುಚ್ಚಿ ಹಾಕಲು ಯತ್ನಿಸಿರು ಆರೋಪ ಕೇಳಿ ಬಂದಿದೆ.
ಆರೋಪಿ ಆಮಿಷವೊಡ್ಡಿದ್ರೆ ಸೂಕ್ತ ಕ್ರಮ.. ಗೃಹಸಚಿವರ ಸ್ಪಷ್ಟನೆ
ಪ್ರಭಾವಿ ಮಗನ ಕಾರು ಅಪಘಾತ ಕೇಸ್ನಲ್ಲಿ ಪೊಲೀಸರ ಒಂದೊಂದು ನಡೆಯೂ ಸಾಕಷ್ಟು ಅನುಮಾನ ಮೂಡಿಸಿದೆ. ಪ್ರಕರಣದ ಮುಚ್ಚಿ ಹಾಕಲು ಆಮೀಷವೊಡ್ಡಿದ್ರೆ, ಸೂಕ್ತ ಕ್ರಮಕೈಗೊಳ್ಳುವುದಾಗಿ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ಒಟ್ಟಾರೆ. ಟೆಕ್ಕಿ ಸಂಧ್ಯಾಳ ಸಾವಿನ ಪ್ರಕರಣದಲ್ಲಿ ಸೂಕ್ತ ನ್ಯಾಯಕ್ಕಾಗಿ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ. ಇದೀಗ ಪೊಲೀಸರು ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೇಳ್ಳಬೇಕಿದೆ.