
ಸಾಧನೆಗಳು ಮಾತನಾಡಬೇಕು ಎನ್ನುವುದಕ್ಕೆ ರಾಮಲಿಂಗಾರೆಡ್ಡಿ ಅವರೇ ಉದಾಹರಣೆ
ಕರ್ನಾಟಕ ರಾಜ್ಯದ ಮುಜರಾಯಿ ಮತ್ತು ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿರವರು ರಾಜ್ಯದಲ್ಲಿ ತಮ್ಮ ಇಲಾಖೆಯಲ್ಲಿ ಅನೇಕ ಸಾಧನೆಗಳ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ.
- ಎನ್ಡಿಎ ಸರ್ಕಾರದ ಕಣ್ಣು ಈಗ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ: ಸಿದ್ದರಾಮಯ್ಯ
- ವೈದ್ಯಕೀಯ ಪದವಿ ಇಲ್ಲದೇ ವೈದ್ಯವೃತ್ತಿ ಮಾಡುತ್ತಿದ್ದ 6 ಜನರಿಗೆ 1 ಲಕ್ಷ ರೂ. ದಂಡ
- ಕಿಮ್ಸ್ ನೂತನ 450 ಹಾಸಿಗೆಯ ಆಸ್ಪತ್ರೆಗೆ ಶಿವರಾಜ್ ತಂಗಡಗಿ ಭೇಟಿ, ಪರಿಶೀಲನೆ
- ಅಖಿಲ ಭಾರತ ಕರ್ತವ್ಯ ಪಥಕ್ಕೆ ನಯನಾ ಎಚ್.ಎ ಆಯ್ಕೆ
- ಸಾಧನೆಗಳು ಮಾತನಾಡಬೇಕು ಎನ್ನುವುದಕ್ಕೆ ರಾಮಲಿಂಗಾರೆಡ್ಡಿ ಅವರೇ ಉದಾಹರಣೆ
ಬಿಜೆಪಿಯವರಿಗೆ ಕೇವಲ ಮಾತನಾಡುವುದೇ ಸಾಧನೆಯಾಗಿರುತ್ತದೆ. ಆದರೆ ರಾಮಲಿಂಗಾರೆಡ್ಡಿ ಅವರು ಸಾಧನೆಗಳು ಮಾತನಾಡಬೇಕು ಎನ್ನುವ ಮಾತಿನ ಅರ್ಥ ಅರಿತು ಅದರಂತೆ ನಡೆಯುತ್ತಿದ್ದಾರೆ.
- ಮುಜರಾಯಿ ಇಲಾಖೆ ಮಹತ್ವ ಹೆಚ್ಚಿಸಿದ ರಾಮಲಿಂಗಾರೆಡ್ಡಿ
- ದೆಹಲಿಯಲ್ಲಿ ಕೆ.ಕೆ.ಆರ್.ಟಿ.ಸಿ. ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
- ಕಡಲೆಕಾಯಿ ಪರಿಷೆಯನ್ನು ಸುಂಕರಹಿತ ಮಾಡಿದ ರಾಮಲಿಂಗಾರೆಡ್ಡಿ
ಅಧಿಕಾರಕ್ಕೆ ಬಂದ ದಿನದಿಂದ ಸಾರಿಗೆ ಮತ್ತು ಮುಜರಾಯಿ ಇಲಾಖೆಯಲ್ಲಿ ಪ್ರತಿದಿನವೂ ಅರ್ಚಕರಿಗೆ ಮತ್ತು ಸಾರಿಗೆ ನೌಕರರಿಗೆ ಒಂದಲ್ಲ ಒಂದು ರೀತಿಯ ಅನುಕೂಲಕರವಾದ ಯೋಜನೆಗಳನ್ನು ಘೋಷಣೆ ಮಾಡುತ್ತಲೇ ಇದ್ದಾರೆ. ಕೇವಲ ಘೋಷಣೆಗೆ ಸೀಮಿತ ಮಾಡದೆ ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಸಹಸ್ರಾರು ಅರ್ಚಕರು ಪ್ರತಿದಿನವೂ ಸಚಿವರನ್ನ ಅಭಿನಂದಿಸುತ್ತ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ. ಕಾರಣ ಯಾರು ಸಹ ಅರ್ಚಕರ ಮತ್ತು ಅವರ ಕುಟುಂಬದವರ ಶಿಕ್ಷಣ, ಆರೋಗ್ಯದ, ಸೌಕರ್ಯ ಸೌಲಭ್ಯಗಳ ಕಡೆಗೆ ಗಮನವನ್ನೇ ನೀಡಿರಲಿಲ್ಲ. ಆದರೆ ರಾಮಲಿಂಗಾರೆಡ್ಡಿರವರು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದಂತಹ ಕಾರ್ಯಕ್ರಮಗಳನ್ನು ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ. ಇದರಿಂದಾಗಿ ಅರ್ಚಕರ ವಲಯದಲ್ಲಿ ಸಮಾಧಾನವಾದಂತಹ ಮನಸ್ಸಿನಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಸಾರಿಗೆ ಇಲಾಖೆಯಲ್ಲೂ ಸಹ ನೌಕರರಿಗೆ ಅನೇಕ ರೀತಿಯ ಸೌಲಭ್ಯಗಳನ್ನ ಆರ್ಥಿಕವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕಲ್ಪಿಸಿ ಕೊಡುವುದರ ಮೂಲಕ ಅವರು ಸಹ ತಮ್ಮ ಆರೋಗ್ಯದ ಸಮಸ್ಯೆಗಳು ಬಂದ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗದೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನ ಪಡೆದುಕೊಂಡು ತಮ್ಮ ಜೀವವನ್ನು ಉಳಿಸಿಕೊಳ್ಳಲು ಅನುಕೂಲಕರವಾಗುವ ಯೋಜನೆಯನ್ನು ರೂಪಿಸಿ ಕೊಟ್ಟಿದ್ದಾರೆ. ಅವರ ಕುಟುಂಬದವರ ಹಿತಕ್ಕೂ ಗಮನ ಹರಿಸಿದ್ದಾರೆ. ಆಕಸ್ಮಿಕ ಅವಘಡಗಳು ವೃತ್ತಿಯ ಸಂದರ್ಭದಲ್ಲಿ ಸಂಭವಿಸಿದರೆ ಅದಕ್ಕೂ ಸಹ ದೇಶದಲ್ಲಿಯೇ ಎಲ್ಲೂ ಇರದಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತಾ ಬಂದಿದ್ದಾರೆ.
ರಾಜ್ಯ ಸರ್ಕಾರದ ಅತ್ಯಂತ ಪ್ರಮುಖವಾದಂತಹ ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರಿಗೂ ತಲುಪಿಸುತ್ತಿರುವ ಶಕ್ತಿ ಯೋಜನೆಯ ಸಮರ್ಪಕವಾದಂತಹ ಅನುಷ್ಠಾನದ ನಡುವೆಯೂ, ನೌಕರರ ಹಿತವನ್ನು ಕಾಯುತ್ತಾ, ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹೊಸ ಯೋಜನೆಗಳನ್ನು ರೂಪಿಸುತ್ತಾ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ, ಮನಸ್ಸು ಇದ್ದರೆ ಬದ್ಧತೆ ಇದ್ದರೆ, ಯಾವ ರೀತಿಯಲ್ಲಿ ಕೆಲಸ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ.
ಹಿಂದೂ ಧರ್ಮದ ಬಗ್ಗೆ, ಹಿಂದೂ ದೇವರುಗಳ ಬಗ್ಗೆ, ದೇವಾಲಯಗಳ ಬಗ್ಗೆ, ಸದಾ ಕಾಲ ಗಂಟಲು ಹರಿದುಕೊಂಡು ಮಾತನಾಡುವ ಬಿಜೆಪಿ ನಾಯಕರುಗಳು, ಕೇವಲ ತಮ್ಮ ಮಾತುಗಳನ್ನ ದ್ವೇಷಕ್ಕೆ ಮತ್ತು ಅಸೂಯೆ ಕಾರಣಕ್ಕೆ ಸೀಮಿತ ಮಾಡಿಕೊಂಡಿದ್ದರು. ಸರ್ಕಾರ ಇದ್ದ ಸಂದರ್ಭದಲ್ಲಿ ಇವರುಗಳು ಅಧಿಕಾರದಲ್ಲಿದ್ದಾಗ ಇವರಿಗೆ ಯಾವ ಕಲ್ಪನೆಗಳು ಇರಲಿಲ್ಲ, ಆದರೆ ಯಾವುದೇ ರೀತಿಯ ಆರ್ಭಟವನ್ನು ಮಾಡದೆ, ಅಬ್ಬರಿಸಿ ಮಾತನಾಡದೆ, ಮೌನವಾಗಿಯೇ ಮುಜರಾಯಿ ಇಲಾಖೆಯಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೆ ಬೇಕಾದಂತಹ ಅನೇಕ ಕ್ರಾಂತಿಕಾರಿ ಕೆಲಸವನ್ನು ಮಾಡಿದ್ದಾರೆ.
ವಿಶೇಷವಾಗಿ ಸಾವಿರಾರು ಕೋಟಿ ರೂಪಾಯಿಗಳ 11,499 ಎಕರೆ ಭೂಮಿಯನ್ನ ಒತ್ತುವರಿದಾರರಿಂದ, ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಮರಳಿ ಹಸ್ತಾಂತರಿಸಿ ಅದಕ್ಕೆ ಬೇಕಾದಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟು ದೇವಾಲಯಗಳ ಆಸ್ತಿಗಳನ್ನ ಯಾರ ಪಾಲಾಗದಂತೆ ಕಾಪಾಡಿದ್ದಾರೆ. ಒತ್ತುವರಿದಾರರು ಎಷ್ಟೇ ದೊಡ್ಡವರಾದರೂ, ಯಾವುದೇ ಮುಲಾಜಿಲ್ಲದೆ ತೆರವು ಮಾಡಿದ್ದಾರೆ. ಈ ರೀತಿಯ ಒಂದು ಕಾರ್ಯವನ್ನು ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಮಾಡಲು ಸಾಧ್ಯವಾಗಿರಲಿಲ್ಲ. ಕಾರಣ ಅವರು ಕೇವಲ ಮಾತನಾಡುವುದಷ್ಟೇ ಸಾಧನೆ ಎಂದು ಭಾವಿಸಿರುತ್ತಾರೆ.
ಒಬ್ಬ ವ್ಯಕ್ತಿ ಅಧಿಕಾರ ಸಿಕ್ಕ ಸಂದರ್ಭದಲ್ಲಿ ದೂರದೃಷ್ಟಿತ್ವ ಮತ್ತು ಕನಸುಗಳಿದ್ದರೆ ಯಾವ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿ ಇಲಾಖೆಗಳಿಗೆ ಹೊಸ ಸ್ಪರ್ಶವನ್ನು ನೀಡಬಹುದು ಎನ್ನುವುದಕ್ಕೆ ರಾಮಲಿಂಗಾರೆಡ್ಡಿರವರ ಬದ್ಧತೆಯ ಮತ್ತು ಪರಿಣಾಮಕಾರಿಯಾದ ಕಾರ್ಯ ವೈಖರಿಯ ಸಾಕ್ಷಿಯಾಗಿದೆ.