Crime

ಹಿಂದೂ ಯುವಕನೊಂದಿಗೆ ಮದ್ವೆಯಾದ ಮುಸ್ಲಿಂ ಯುವತಿ: ನಾಪತ್ತೆಯಾಗಿದ್ದ ಜೋಡಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷ

ಬೆಳ್ತಂಗಡಿ ತಾಲೂಕಿನ ಪಟ್ರಮೆಯಲ್ಲಿ ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಸುಹಾನಾ, ಹಿಂದೂ ಯುವಕ ಹರೀಶ್ ಗೌಡರನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಫೇಸ್ಬುಕ್​ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದ ಜೋಡಿ, ಕಂಪ್ಯೂಟರ್ ತರಗತಿಗೆಂದು ಹೋಗಿದ್ದ ಸುಹಾನಾ ನಾಪತ್ತೆಯಾದ ನಂತರ ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ.

ಹಿಂದೂ ಯುವಕನೊಂದಿಗೆ ಮದ್ವೆಯಾದ ಮುಸ್ಲಿಂ ಯುವತಿ: ನಾಪತ್ತೆಯಾಗಿದ್ದ ಜೋಡಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷ

ಹಿಂದೂ ಯುವಕನೊಂದಿಗೆ ಮದ್ವೆಯಾದ ಮುಸ್ಲಿಂ ಯುವತಿ: ನಾಪತ್ತೆಯಾಗಿದ್ದ ಜೋಡಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷ

ಮಂಗಳೂರು, ಜನವರಿ 10: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ (girl) ಹಿಂದು ಯುವಕನ ಜತೆ ಮದುವೆಯಾಗಿ ಪತ್ತೆ ಆಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ‌ ಪಟ್ರಮೆ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಹರೀಶ್ ಗೌಡ-ಸುಹಾನಾ ವಿವಾಹವಾಗಿದ್ದಾರೆ. ಬಳಿಕ ಜೋಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ‌ ಪಟ್ರಮೆ ಗ್ರಾಮದ ಯುವಕ ಹರೀಶ್ ಗೌಡನನ್ನು ಪ್ರೀತಿಸಿ ಸುಹಾನಾ ಮದುಮೆ ಮಾಡಿಕೊಂಡಿದ್ದಾರೆ. ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಯುವತಿ ಹೇಳಿದ್ದಾಳೆ.

ಫೇಸ್​ಬುಕ್​ನಲ್ಲಿ ಪರಿಚಯವಾಗಿ ಪ್ರೀತಿ ಮಾಡಿದ್ದರು. ಬಳಿಕ ಕಂಪ್ಯೂಟರ್ ಕ್ಲಾಸ್​ಗೆಂದು ಹೋಗಿದ್ದವಳು ನಾಪತ್ತೆ ಆಗಿದ್ದಳು. ಯುವತಿ ಮನೆಯವರು ಮೂಡಬಿದರೆ ಠಾಣೆಯಲ್ಲಿ ನಾಪತ್ತೆ ಕೇಸ್​ ದಾಖಲಿಸಿದ್ದರು.

ಪ್ರೀತಿ ನಿರಾಕರಿಸಿದ ಯುವತಿ: ಭಗ್ನ ಪ್ರೇಮಿಯಿಂದ ಸೂಸೈಡ್

ಅಪ್ರಾಪ್ತೆಯೊಬ್ಬಳಿಂದ ಪ್ರೀತಿ ನಿರಾಕರಣೆ ‌ಹಿನ್ನೆಲೆ ಭಗ್ನ ಪ್ರೇಮಿಯೊಬ್ಬ ಅಪ್ರಾಪ್ತೆಯ ಮನೆಯ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿತ್ತು. ನಾಗಮಂಗಲ ‌ತಾಲೂಕಿನ ಬಸವೇಶ್ವರ ನಗರದ ನಿವಾಸಿ ರಾಮಚಂದ್ರ(21) ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ.

ಅಂದಹಾಗೆ ಲಾರಿ ಚಾಲಕನಾಗಿದ್ದ ಈತ, ಕಾಲೇಜು ಯುವತಿಯನ್ನ ಪ್ರೀತಿಸುತ್ತಿದ್ದ. ವರ್ಷದ ಹಿಂದೆ ಆಕೆಯನ್ನ ಮನೆಯಿಂದ ಕೂಡ ಕರೆದುಕೊಂಡು ಹೋಗಿದ್ದ. ಇದೇ ವಿಚಾರ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಕಿಡ್ನಾಪ್, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿ, ರಾಮಚಂದ್ರ ಜೈಲು ಪಾಲಾಗಿದ್ದ.

ಆನಂತರ ರಾಜೀ ಸಂಧಾನ ಮಾಡಿಕೊಂಡು ಜೈಲ್​ನಿಂದ ಹೊರಬಂದಿದ್ದ. ಜೈಲ್​ನಿಂದ ಬಂದರೂ ಬುದ್ದಿ ಕಲಿತಿರಲಿಲ್ಲ. ಪದೇ ಪದೇ ಅಪ್ರಾಪ್ತೆಗೆ ಪೀಡಿಸುತ್ತಿದ್ದ. ನನ್ನ ವಾಟ್ಸಪ್ ಸ್ಟೇಟಸ್​ನಲ್ಲಿ ಲವ್ ಫೇಲ್ಯೂರ್ ಬಗ್ಗೆ ಹಾಕಿಕೊಂಡಿದ್ದ. ಈ ನಡುವೆ ಆಕೆ ಮತ್ತೊಬ್ಬನನ್ನ ಲವ್ ಮಾಡುತ್ತಿದ್ದಾಳೆ ಎಂಬ ಅನುಮಾನ ಕೂಡ. ಹೀಗಾಗಿ ಅದೊಂದು ದಿನ ಸ್ನೇಹಿತರ ಜೊತೆ ಎಣ್ಣೆ ಹೊಡೆದು ಮಧ್ಯರಾತ್ರಿ ಅಪ್ರಾಪ್ತಯ ಮನೆಯ ಮುಂದೆ ಹೋಗಿ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

Show More

Related Articles

Leave a Reply

Your email address will not be published. Required fields are marked *

Back to top button