High CourtLatestPoliticsState

ಪೋಕ್ಸೋ ಕೇಸ್​ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಹೈಕೋರ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ನಡೆಯಿತು. ಪ್ರಾಸಿಕ್ಯೂಷನ್ ಮತ್ತು ಪರ ವಕೀಲರು ತಮ್ಮ ವಾದಗಳನ್ನು ಮಂಡಿಸಿದರು. ಮನೆಯ ಎಂಟ್ರಿ ರಿಜಿಸ್ಟರ್ ತಿರುಚಲ್ಪಟ್ಟಿದೆ ಮತ್ತು ಫಿರ್ಯಾದಿದಾರರ ವಿಡಿಯೋ ಅಳಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಹೈಕೋರ್ಟ್ ಎಲ್ಲಾ ವಾದಗಳನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿದೆ.

ಪೋಕ್ಸೋ ಕೇಸ್​ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು, ಜನವರಿ 17: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (bs yediyurappa) ವಿರುದ್ಧದ ಪೋಕ್ಸೋ ಪ್ರಕರಣ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಕರ್ನಾಟಕ ಹೈಕೋರ್ಟ್ ಎಲ್ಲರ ವಾದ ಆಲಿಸಿ ಆದೇಶ ಕಾಯ್ದಿರಿಸಿದೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಖುದ್ದು ಹಾಜರಿಗೆ ನೀಡಿದ್ದ ವಿನಾಯತಿಯನ್ನು ವಿಸ್ತರಿಸಿದೆ. ಆ ಮೂಲಕ ಮಾಜಿ ಸಿಎಂಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ರದ್ದು ಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆದೇಶ ಕಾಯ್ದಿರಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಪ್ರೊ.ರವಿವರ್ಮಕುಮಾರ್ ವಾದಮಂಡನೆ ಮಾಡಿದ್ದು, ಬಿ.ಎಸ್.ಯಡಿಯೂರಪ್ಪ ಮನೆಯ ಎಂಟ್ರಿ ರಿಜಿಸ್ಟರ್ ತಿರುಚಲಾಗಿದೆ ಎಂದು ಹೇಳಿದ್ದಾರೆ.

ಫಿರ್ಯಾದಿ, ಬಾಲಕಿ, ಶಿವಾನಂದ ತಗಡೂರು ಬಂದ ಸಮಯ ಬದಲಿಸಲಾಗಿದೆ. ಆರೋಪಿಗಳು ಫಿರ್ಯಾದಿ ಫೇಸ್ ಬುಕ್​ನಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಬಿಎಸ್‌ ಯಡಿಯೂರಪ್ಪ ಮನೆಗೆ ಕರೆತಂದು ವಿಡಿಯೋ ಡಿಲೀಟ್ ಮಾಡಿದ್ದಾರೆಂದು ವಾದಿಸಿದರು.

ಮೊಬೈಲ್ ರೆಕಾರ್ಡಿಂಗ್​ನಲ್ಲಿ ಯಡಿಯೂರಪ್ಪ ಧ್ವನಿಯಿದೆ ಎಂದ ಜಡ್ಜ್, ಆ ವಿಡಿಯೋ ರೆಕಾರ್ಡಿಂಗ್​ನಲ್ಲಿರುವ ಹೇಳಿಕೆ ಡಿಸ್ಟರ್ಬಿಂಗ್ ಆಗಿವೆ. ಯಡಿಯೂರಪ್ಪ ಮನೆಗೆ ಫಿರ್ಯಾದಿ ಮಹಿಳೆ ಪದೇಪದೆ ಬಂದಿದ್ದಾರೆ. ಈ ಘಟನೆ ನಡೆದ ನಂತರ ಪದೇಪದೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಫಿರ್ಯಾದಿ ಈ ಹಿಂದೆ 56 ದೂರು ನೀಡಿರುವ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಬೇಕು. ಆರೋಪಪಟ್ಟಿಯಲ್ಲಿನ ಅಂಶಗಳೇ ಸಂಪೂರ್ಣ ಸತ್ಯವೆಂದು ಒಪ್ಪಬಾರದು ಎಂದು ಬಿ.ಎಸ್.ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಿಸಿದರು. ಆ ದಿನ ಏನೂ ನಡೆದಿಲ್ಲವೆಂದು ಅಲ್ಲಿದ್ದ ಶಿವಾನಂದ ತಗಡೂರು, ಆರಾಧ್ಯ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ಅದನ್ನು ತನಿಖೆಯ ಭಾಗವಾಗಿ ಪರಿಗಣಿಸಿಲ್ಲ. ಕೇವಲ ಸಂತ್ರಸ್ತೆ ಹೇಳಿಕೆಯಷ್ಟೇ ಅಲ್ಲ ಸಾಕ್ಷ್ಯಗಳೂ ಅಗತ್ಯವಿದೆ. ಎಲ್ಲ ಸಾಕ್ಷಿಗಳೂ ಈ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆಂದು ವಾದ ಮಂಡನೆ ಮಾಡಿದ್ದಾರೆ.

ಅವಳು ನನ್ನ ಮೊಮ್ಮಗಳಿದ್ದಂತೆ ನಾನು ನೋಡಿದೆ ಚೆಕ್ ಮಾಡಿದೆ. ಬಹಳ ಒಳ್ಳೇ ಹುಡುಗಿ ಅವಳು, ಏನು ಬೇಕೋ ಸಹಾಯ ಮಾಡುತ್ತೇನೆ ಎಂದು ಯಡಿಯೂರಪ್ಪ ವಿಡಿಯೋದಲ್ಲಿ ಹೇಳಿದ್ದಾರೆಂದು ಆರೋಪಿಸಲಾಗಿದೆ. ಆದರೆ ಕೇಸ್ ಬಗ್ಗೆ ಆಕೆ ಬಳಿ ಚೆಕ್ ಮಾಡಿದೆ. ಯಾರನ್ನೂ ರೂಮಿನ ಒಳಗೆ ಕರೆದುಕೊಂಡು ಹೋಗಿಲ್ಲವೆಂದು ಯಡಿಯೂರಪ್ಪ ಹೇಳಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button