
ವಕೀಲ ಜಗದೀಶ್ ಸಾವಿಗೆ ಟ್ವಿಸ್ಟ್: ಪೊಲೀಸರ ತನಿಖೆ ವೇಳೆ ಅಸಲಿ ಸತ್ಯ ಬಯಲು
ಬೆಂಗಳೂರಿನ ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ ಅನುಮಾನಾಸ್ಪದ ಸಾವು ಪ್ರಕರಣ ಸಾಕಷ್ಟು ಅನುಮಾಗಳಿಗೆ ಕಾರಣವಾಗಿತ್ತು. ಕೊಲೆ ಮಾಡಲಾಗಿದೆಯಾ, ಇಲ್ಲಾ ಅಪಘಾತನಾ ಎಂಬುದರ ಬಗ್ಗೆ ಪೊಲೀಸರು ಗಂಭೀರವಾಗಿ ತನಿಖೆ ಮಾಡಿದ್ದರು. ಅದರಂತೆಯೇ ಇದೀಗ ಪೊಲೀಸರ ತನಿಖೆ ವೇಳೆ ಅವರ ಸಾವಿಗೆ ಏನು ಕಾರಣವೆಂಬುವುದು ಬಯಲಾಗಿದೆ.
ವಕೀಲ ಜಗದೀಶ್ ಸಾವಿಗೆ ಟ್ವಿಸ್ಟ್: ಪೊಲೀಸರ ತನಿಖೆ ವೇಳೆ ಅಸಲಿ ಸತ್ಯ ಬಯಲು
ವಕೀಲ ಜಗದೀಶ್
ಬೆಂಗಳೂರು, ಮೇ 05: ವಕೀಲ ಜಗದೀಶ್ (lawyer Jagadish) ಶವ ಇತ್ತೀಚೆಗೆ ನಗರದ ನೈಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆ ಆಗಿತ್ತು. ರಸ್ತೆ ಪಕ್ಕದಲ್ಲಿ ಅನಾಥವಾಗಿ ಬಿದಿದ್ದ ಮೃತದೇಹ (deadbody) ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಸುಮಾರು 20 ಪೊಲೀಸರ ತಂಡ ಈ ಘಟನೆ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದರು. ಅದರಂತೆಯೇ ಇದೀಗ ಪೊಲೀಸರ ತನಿಖೆ ವೇಳೆ ಸಾವಿನ ಕಾರಣ ಬಯಲಾಗಿದೆ. ವಕೀಲ ಜಗದೀಶ್ ಸಾವಿಗೆ ರೋಡ್ ರೇಜ್ ಕಾರಣವಾಗಿದೆ.
ವಕೀಲ ಜಗದೀಶ್ ನೈಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಲಾರಿಯೊಂದು ಟಚ್ ಆಗಿದೆ. ಹಿಗಾಗಿ ಕಾರು ನಿಲ್ಲಿಸಿ ಲಾರಿ ಚಾಲಕನ ಬಳಿ ಹೋಗಿ ಜಗದೀಶ್ ವಾಗ್ವಾದ ಮಾಡಿದ್ದಾರೆ. ಈ ವಾಗ್ವಾದದ ಭರದಲ್ಲಿ ತಮಗೆ ಅರಿವಿಲ್ಲದೆ ನಡು ರಸ್ತೆಗೆ ಬಂದಿದ್ದ ಜಗದೀಶ್ಗೆ ಅದೇ ವೇಳೆ ವೇಗವಾಗಿ ಬರುತ್ತಿದ್ದ ಮತ್ತೊಂದು ಲಾರಿ ಟಚ್ ಆಗಿದೆ. ಇದು ಆ ಲಾರಿ ಚಾಲಕನ ಅರಿವಿಗೆ ಬಂದಿಲ್ಲ.
ಲಾರಿ ಟಚ್ ಆಗುತ್ತಿದ್ದಂತೆ ತಕ್ಷಣ ಕೆಳಗೆ ಬಿದ್ದ ಜಗದೀಶ್ ತೀವ್ರ ರಕ್ತಸ್ತ್ರಾವವಾಗಿ ಸಾವನ್ನಪಿದ್ದಾರೆ. ಜಗದೀಶ್ಗೆ ಟಚ್ ಮಾಡಿದ್ದ ಲಾರಿ ಚಾಲಕನಿಗೆ ಏನೋ ತಾಗಿದೆ ಎಂದು ಸುಮಾರು ಅರ್ಧ ಕಿ.ಮೀ ಮುಂದೆ ಹೋದ ಮೇಲೆ ಅನ್ನಿಸಿದೆ. ಬಳಿಕ ಚಾಲಕ ಲಾರಿ ನಿಲ್ಲಿಸಿ ಪರಿಶೀಲನೆ ಮಾಡಿದ್ದು, ಏನೂ ಆಗಿಲ್ಲ ಅಂದುಕೊಂಡು ಮತ್ತೆ ತೆರಳಿದ್ದಾರೆ. ಸದ್ಯ ಕೆಂಗೇರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನಲೆ
ಮೇ 2ರ ಸಂಜೆ 7.30ರ ಸುಮಾರಿಗೆ 112 ಕರೆಯೊಂದು ಬಂದಿತ್ತು. ತಕ್ಷಣ ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ನೈಸ್ ರಸ್ತೆಯ ಬದಿ ಪಾರ್ಕಿಂಗ್ ಲೈಟ್ ಆನ್ ಆಗಿದ್ದ ಕಾರೊಂದು ನಿಂತಿತ್ತು. ಅಲ್ಲಿಂದ ನೂರು ಮೀಟರ್ ದೂರದಲ್ಲಿ ವಕೀಲ ಜಗದೀಶ್ ಶವ ಬಿದಿತ್ತು. ಅನುಮಾನಗೊಂಡ ಪೊಲೀಸರು ಸ್ಥಳಕ್ಕೆ ಎಫ್.ಎಸ್.ಎಲ್ ತಂಡ ಕರೆಸಿಕೊಂಡು ಸಾಕ್ಷಿಗಳ ಕಲೆ ಹಾಕಿದ್ದಾರೆ. ವಕೀಲ ಜಗದೀಶ್ ಸಂಬಂಧಿಯೊಬ್ಬರು ನೀಡಿದ ದೂರಿನ ಅನ್ವಯ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.
ಈ ಘಟನೆ ಹಿಂದೆ ನಾನಾ ಅನುಮಾನಗಳು ಮೂಡಿದ್ದು, ಪೊಲೀಸರು ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಮೂರು ತನಿಖಾ ತಂಡ ರಚಿಸಲಾಗಿದ್ದು, ಸುಮಾರು 20 ಪೊಲೀಸರು ಘಟನೆ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದರು.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ: ಬಿಜೆಪಿ MLC ಸಿಟಿ ರವಿಗೆ ಶಾಕ್ ಕೊಟ್ಟ ಹೈಕೋರ್ಟ್
ಕಾರು ಟಚ್ ಆದ ವಿಚಾರಕ್ಕೆ ಗಲಾಟೆಯಾಗಿ ಮರ್ಡರ್ ಆಯ್ತಾ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದೆಯಾ, ಇಲ್ಲ ಅಪಘಾತನಾ ಎಂಬುದರ ಬಗ್ಗೆ ತನಿಖೆ ನಡೆಸಿದ್ದರು. ಜೊತೆಗೆ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದರು. ಹಿರಿಯ ಅಧಿಕಾರಿಗಳು ಕೂಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಜಗದೀಶ್ ಮೂಲತಃ ಮಂಡ್ಯದ ಮಳವಳ್ಳಿಯವರು. ಬೆಂಗಳೂರಿನ ಉಲ್ಲಾಳದಲ್ಲಿ ವಾಸವಾಗಿದ್ದು, ವಕೀಲ ವೃತ್ತಿ ಮಾಡುತ್ತಿದ್ದರು. ಅಲ್ಲದೆ ಜಗದೀಶ್ ಮೃತದೇಹ ಯಾವುದೇ ಶಾರ್ಪ್ ವೆಪನ್ಗಳಿಂದ ಹಲ್ಲೆ ಆಗಿಲ್ಲ ಅನ್ನೋದು ಮೆಲ್ನೋಟಕ್ಕೆ ಕಂಡುಬಂದಿತ್ತು. ಆದರೆ ಕೆಲಸ ಮುಗಿಸಿ ಮನೆಗೆ ಮರಳಿ ಬರಬೇಕಿದ್ದ ವಕೀಲ ಜಗದೀಶ್ ಸಾವು ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು. ಸದ್ಯ ಪೊಲೀಸರು ತನಿಖೆ ವೇಳೆ ಜಗದೀಶ ಹತ್ಯೆ ರಹಸ್ಯ ಬಯಲು ಮಾಡಿದ್ದಾರೆ.