
BollywoodCinemaLatestSouth cinema
ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು
ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu)ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಮನೆಗೆ ಎಂಟ್ರಿಯಾಗಿರುವ ಮುದ್ದು ಮಗಳ ಆರೈಕೆಯಲ್ಲಿದ್ದಾರೆ. ಈಗ ಮಗಳ ಜೊತೆಗಿನ ಮುದ್ದಾದ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮಗಳ ಆಗಮನ ಖುಷಿಯಲ್ಲಿದ್ದಾರೆ. ಆಗಾಗ ಮಗಳ ಜೊತೆಗಿನ ಫೋಟೋ, ವೀಡಿಯೋ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ಅಪ್‌ಡೇಟ್ ಕೊಡುತ್ತಾರೆ.
ನಟಿ ಬಿಪಾಶಾ ಮಗುವಿನ ಫೋಟೋ ಶೇರ್ ಮಾಡಿ, ಚೆಂದದ ಅಡಿಬರಹ ನೀಡಿದ್ದಾರೆ. ನನ್ನ ಜೀವನದ ಅತ್ಯಂತ ಸಂತೋಷದ ವಿಷಯವೆನೆಂದರೆ ಮಗಳು ದೇವಿಗೆ (Devi) ತಾಯಿಯಾಗಿದ್ದು ಎಂದು ಬರೆದುಕೊಂಡಿದ್ದಾರೆ. ಈ ಮುದ್ದಾದ ಪೋಸ್ಟ್ ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸದ್ಯ ಮಗಳು ಆರೈಕೆಯಲ್ಲಿರುವ ನಟಿ ಬಿಪಾಶಾ ಬಸು ಸಿನಿಮಾಗೆ ಕಮ್‌ಬ್ಯಾಕ್ ಆಗುತ್ತಾರಾ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.