CricketSports

ಆಸ್ಟ್ರೇಲಿಯಾದ ದಾಖಲೆಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಇಂಗ್ಲೆಂಡ್

       ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯು 2-1         ಅಂತರಕ್ಕೆ ಬಂದು ನಿಂತಿದೆ. ಇದಕ್ಕೂ ಮುನ್ನ ನಡೆದ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿತ್ತು. ಇದೀಗ ಮೂರನೇ                 ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಸರಣಿ ಆಸೆಯನ್ನು ಜೀವಂತವಿರಿಸಿಕೊಂಡಿದೆ.

       ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸುವಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ           ಕಳೆದ 348 ದಿನಗಳಿಂದ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಆಸ್ಟ್ರೇಲಿಯಾ ತಂಡದ ದಾಖಲೆಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್                 ಬಿದ್ದಂತಾಗಿದೆ.

 ಚೆಸ್ಟರ್-ಲೆ-ಸ್ಟ್ರೀಟ್​ನ ರಿವರ್​ಸೈಡ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ (60), ಅಲೆಕ್ಸ್ ಕ್ಯಾರಿ (77) ಅರ್ಧಶತಕ ಬಾರಿಸಿ ಮಿಂಚಿದ್ದರು. ಇನ್ನು ಕೊನೆಯ ಓವರ್​ಗಳ ವೇಳೆ ಆರೋನ್ ಹಾರ್ಡಿ 44 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 304 ರನ್​ ಕಲೆಹಾಕಿತು.

305 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಫಿಲ್ ಸಾಲ್ಟ್ (0) ಹಾಗೂ ಬೆನ್ ಡಕೆಟ್ (8) ಮೂರು ಓವರ್​ಗಳ ಒಳಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ವಿಲ್ ಜಾಕ್ಸ್ ಹಾಗೂ ಹ್ಯಾರಿ ಬ್ರೂಕ್ ಅತ್ಯುತ್ತಮ ಜೊತೆಯಾಟವಾಡಿದರು. ಜಾಕ್ಸ್ 84 ರನ್ ಬಾರಿಸಿ ಔಟಾದರೆ, ಬ್ರೂಕ್ ಅಜೇಯ 110 ರನ್ ಬಾರಿಸಿದರು.

ಇಂಗ್ಲೆಂಡ್ ತಂಡವು 4 ವಿಕೆಟ್ ಕಳೆದುಕೊಂಡು 257 ರನ್​ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಫಲಿತಾಂಶ ನಿರ್ಧರಿಸಲು DLS ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಆಸ್ಟ್ರೇಲಿಯಾಗಿಂತ ಇಂಗ್ಲೆಂಡ್ ತಂಡವು 46 ರನ್​ಗಳ ಮುನ್ನಡೆ ಹೊಂದಿದ್ದರಿಂದ ಆತಿಥೇಯರನ್ನು ವಿಜಯಿ ಎಂದು ಘೋಷಿಸಲಾಯಿತು.

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿದೆ. ಅಂದರೆ ಆಸೀಸ್ ಪಡೆಯು ಏಕದಿನ ಕ್ರಿಕೆಟ್​ನಲ್ಲಿ ಸತತ 14 ಪಂದ್ಯಗಳಲ್ಲಿ ಗೆಲುವು ದಾಖಲಿಸುತ್ತಾ ಬಂದಿದೆ. ಆದರೆ 15ನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆಯುವ ಅವಕಾಶ ಕೈ ತಪ್ಪಿಸಿಕೊಂಡಿದೆ. ಏಕದಿನ ಕ್ರಿಕೆಟ್​ನಲ್ಲಿ ಸತತವಾಗಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ಹೊಸ ದಾಖಲೆ ಬರೆಯಲು ಆಸ್ಟ್ರೇಲಿಯಾಗೆ ಕೇವಲ 8 ಗೆಲುವಿನ ಅವಶ್ಯಕತೆಯಿತ್ತು. ಆದರೀಗ 14 ಪಂದ್ಯಗಳೊಂದಿಗೆ ಈ ದಾಖಲೆ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆ.

ವಿಶೇಷ ಎಂದರೆ ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೂಡ ಆಸ್ಟ್ರೇಲಿಯಾ ತಂಡ. 2003 ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದ ಆಸೀಸ್ ಪಡೆಯು ಸತತ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಈ ವಿಶ್ವ ದಾಖಲೆ ನಿರ್ಮಿಸಿದೆ. 11 ವರ್ಷಗಳ ಈ ಹಳೆಯ ದಾಖಲೆಯನ್ನು ಮುರಿಯುವತ್ತ ದಾಪುಗಾಲಿಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೊನೆಗೂ ಸೋಲಿನ ರುಚಿ ತೋರಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button