Bengaluru CityTransport

ಕೆಎಸ್‌ಆರ್‌ಟಿಸಿಗೆ 2 ಅಂತಾರಾಷ್ಟ್ರೀಯ ಪ್ರಶಸ್ತಿ ಗರಿ…KSRTC

ಬೆಂಗಳೂರು, ಆಗಸ್ಟ್ 18: ಕರ್ನಾಟಕದಾದ್ಯಂತ ಸುಗಮ ರಸ್ತೆ ಸಾರಿಗೆ ಸೇವೆ ನೀಡರುತ್ತಿರುವ ಹೆಮ್ಮೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಕೈಗೊಂಡಿರುವ ಅತ್ಯುತ್ತಮ ನೇಮಕಾತಿ ಉಪಕ್ರಮಗಳಿಗಾಗಿ ಎರಡು ಮಹತ್ವದ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಈಗಾಗಲೇ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರಾಜ್ಯ ಸಾರಿಗೆ ನಿಗಮಕ್ಕೆ ಮತ್ತೆರಡು ಸೇರ್ಪಡೆಯಾಗಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ‘ಸಂಸ್ಥೆಯ ಕಟ್ಟಡಕ್ಕಾಗಿ ಪ್ರಶಸ್ತಿ’ (Award for Institution Building) ಮತ್ತು ‘ಅತ್ಯುತ್ತಮ ಸೇರ್ಪಡೆ ನೇಮಕಾತಿ ಕಾರ್ಯಕ್ರಮ ಪ್ರಶಸ್ತಿ-2025’ (Best Inclusion Recruitment Program) ಈ ಎರಡು ವರ್ಗಗಳಲ್ಲಿ ಪ್ರಶಸ್ತಿಗಳು ಧಕ್ಕಿವೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಸಾರಿಗೆ ನಿಗಮದ ಮುಖ್ಯಸ್ಥರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕಳೆದ ಆರೇಳು ವರುಷಗಳಿಂದ ಸ್ಥಗಿತಗೊಂಡಿದ್ದ ನೇಮಕಾತಿಯನ್ನು ಪುನರ್ ಪ್ರಾರಂಭಿಸಲಾಯಿತು. 300 ತಾಂತ್ರಿಕ ಸಹಾಯಕರು, 2000 ಚಾಲಕ ಕಂ ನಿರ್ವಾಹಕರು ಹಾಗೂ ಅನುಕಂಪದ ಆಧಾರದ ಮೇಲೆ 292 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ.

ಈ ಎಲ್ಲಾ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಅತ್ಯಂತ ಪಾರದರ್ಶಕತೆ ಹಾಗೂ ಮಾನವ ಹಸ್ತಕ್ಷೇಪ ಇಲ್ಲದೆ, ಘಟಕಗಳ ನಿಯೋಜನೆಯನ್ನು ಸಹ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡಲಾಗಿದೆ. ಕಳೆದ ಒಂದು ವರ್ಷದ ವರ್ಷದಲ್ಲಿ ಸುಮಾರು 2600 ವಿವಿಧ ಹುದ್ದೆಗಳ ನೇಮಕಾತಿ ಉಪಕ್ರಮವು 20ನೇ ಉದ್ಯೋಗದಾತರ ಬ್ರ್ಯಾಂಡಿಂಗ್ ಪ್ರಶಸ್ತಿಗಳು ರವರು ಪ್ರದಾನ ಮಾಡುವ ಎರಡು ವರ್ಗದಲ್ಲಿ ಲಭಿಸಿವೆ. ಪ್ಯಾನ್ ಪೆಸಿಫಿಕ್ ಹೋಟೆಲ್, ಸಿಂಗಪುರ ಇಲ್ಲಿ 2025ರ ಆಗಸ್ಟ್ 11 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

KSRTC ಟರ್ಮಿನಲ್ 1ರ ಬಳಿ ಎಟಿಎಂ ಸೌಕರ್ಯ

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ‌ದ ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಬ್ಯಾಂಕ್ ಎ‌ಟಿಎಂ ಸೌಲಭ್ಯವಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು. ಸಾರಿಗೆ ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ತುರ್ತು‌ ಕೆಲಸಕ್ಕಾಗಿ‌ ಹಣ‌ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಇಂದು ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ‌ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 1 ರ ಮುಖ್ಯ ರಸ್ತೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಅನ್ನು ಇತ್ತಿಚೆಗೆ ಪ್ರಾರಂಭಿಸಲಾಗಿದೆ.

ನೂತನ ಲಗೇಜ್ ನಿಯಮ ಜಾರಿ: ನಿಗಮದಿಂದ ಸ್ಪಷ್ಟನೆ

ಸಾಮಾಜಿಕ‌ ಜಾಲತಾಣದಲ್ಲಿ ಕೆ ಎಸ್ ಆರ್ ಟಿ ಸಿ ಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಪ್ರಕಟವಾಗಿರುವ ವಿಚಾರ ಸತ್ಯಕ್ಕೆ ದೂರವಾಗಿರುತ್ತದೆ. ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿ ಇದೆ. ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು ಅವಕಾಶಗಳನ್ನು ದಿನಾಂಕ 05-11-1999 ರಿಂದಲೇ (ಬಸ್ಸಿನಲ್ಲಿ‌ರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ನಿಗಮದಲ್ಲಿ ಜಾರಿಯಲ್ಲಿರುತ್ತದೆ.

ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ, 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಯಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ ದಿನಾಂಕ: 28-10-2022 ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿರುತ್ತದೆ ಎಂದು KSRTC ನಿಗಮ ಇತ್ತೀಚೆಗೆ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

Show More

Related Articles

Leave a Reply

Your email address will not be published. Required fields are marked *

Back to top button