Bengaluru CityLatestWayanad

ಸಚಿವ ರಾಮಲಿಂಗ ರೆಡ್ಡಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಮಾನವೀಯ ಸೇವೆ ವಯನಾಡ್ ಸಂತ್ರಸ್ತರಿಗೆ 9 ಟ್ರಕ್‌ಗಳಲ್ಲಿ ಪರಿಹಾರ ಸಾಮಗ್ರಿ ರವಾನೆ

ಬೆಂಗಳೂರು: ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡು ಮತ್ತು ಶಿರೂರು ಸಂಭವಿಸಿದ ಭೂಕುಸಿತದ ದುರಂತಕ್ಕೆ ಸ್ಪಂದಿಸಲು ಪರಿಹಾರ ಸಾಮಾಗ್ರಿಗಳ 9 ಟ್ರಕ್ ಗಳಿಗೆ ಡಿ.ಕೆ‌.ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.

ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಮಾಜಿ ಶಾಸಕಿ ಶ್ರೀಮತಿ ಸೌಮ್ಯಾ ರೆಡ್ಡಿ ಅವರ ನೇತೃತ್ವದಲ್ಲಿ ವಯನಾಡು ಭೂ ಕುಸಿತ ಪ್ರಕರಣದ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದ್ದು, ಇಂದು ಬೆಂಗಳೂರಿನ ಕೋರಮಂಗಲದಲ್ಲಿ ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ಹೊತ್ತ 8 ಟ್ರಕ್ ವಾಹನಗಳಿಗೆ ಚಾಲನೆ ನೀಡಲಾಯಿತು.

ಈ ಟ್ರಕ್ ಗಳೊಂದಿಗೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂ ಮಾಜಿ ಮಹಾ ಪೌರರಾದ ಮಂಜುನಾಥ್ ರೆಡ್ಡಿ, ನಾಗರಾಜು, ಮಂಜುನಾಥ್‌ ಮಾಜಿ ಕಾರ್ಪೋರೇಟರ್ ಗಳು ಬಿಬಿಎಂಪಿ, ವಯನಾಡಿಗೆ ತೆರಳಿದ್ದಾರೆ.

ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದ ದುರಂತಕ್ಕೆ ನೂರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಮಾನವೀಯ ನೆಲೆಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ 9 ಟ್ರಕ್ ಗಳಲ್ಲಿ ರೂ.1.32 ಕೋಟಿ ಮೊತ್ತದಷ್ಟು‌ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಯಿತು. ಈ ದುರಂತದಲ್ಲಿ ಮನೆಗಳನ್ನು ಹಾಗೂ ತಮ್ಮವರನ್ನು ಕಳೆದುಕೊಂಡಿರುವ ಜನರಿಗೆ ತಮ್ಮ ಕೈಲಾದಷ್ಟು ನೆರವು ನೀಡಿ ತಮ್ಮ ಅಳಿಲು ಸೇವೆ ನೀಡಬೇಕಾಗಿದೆ.

ಇಂದು ಟ್ರಕ್ ನಲ್ಲಿ ಸೀರೆ, ಟಿ- ಶರ್ಟ್, ಟೂತ್ ಪೇಸ್ಟ್ / ಬ್ರಷ್, ಸೋಪು, ಬಿಸ್ಕತ್, ಅಕ್ಕಿ, ಬೇಳೆ ಕಾಳುಗಳು, ಸಾಂಬಾರ ಪದಾರ್ಥಗಳು, ಬಕೆಟ್, ಟಾರ್ಪಲಿನ್, ಟವೆಲ್, ಜಮಕಾನ, ಲೋಟ ತಟ್ಟೆಗಳು, ಎಣ್ಣೆ ಇತ್ಯಾದಿ ಅಗತ್ಯ ವಸ್ತುಗಳಿವೆ. ವಯನಾಡಿನ ಭೀಕರತೆ, ಸಾವು ನೋವು ನೋಡಲು ಕಷ್ಟಸಾಧ್ಯವಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಕೋರುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಮನೆಯವರಿಗೆ ಆ ಭಗವಂತ ಕರುಣಿಸಲಿ. ಈ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ನಮ್ಮ ಕೈಲಾದ ಸೇವೆ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಬಿ.ಟಿ.ಎಂ ಮತ್ತು ಜಯನಗರ ವಿಧಾನಸಭಾ‌ ಕ್ಷೇತ್ರದಲ್ಲಿ 2019 ರಲ್ಲಿಯೂ ಕೂಡ ಕೊಡಗು ಕೇರಳ ಪ್ರವಾಹ ದುರಂತಕ್ಕೆ 16 ಲಾರಿಗಳಲ್ಲಿ ರೂ.1 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು‌
ಕಳುಹಿಸಲಾಗಿತ್ತು.

2020 ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಪ್ರವಾಹದ ‌ದುರಂತದ ಸಮಯದಲ್ಲಿ ಸಹ 20 ಲಾರಿಗಳಲ್ಲಿ ರೂ. 1.25 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಗಿತ್ತು.

ಕೋವಿಡ್‌ನ ಸಮಯದಲ್ಲಿ ಪ್ರತಿದಿನ ಒಂದನೆ ಅಲೆ‌ 50000 ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ 35000 ಜನರಿಗೆ ಉಚಿತವಾಗಿ ಊಟವನ್ನು ನೀಡಲಾಗಿತ್ತು ಅದರೊಂದಿಗೆ ಎರಡೂ ಅಲೆಗಳಲ್ಲಿ ಸುಮಾರು 120000 ಕಿಟ್ ಗಳನ್ನು ವಿತರಿಸಲಾಗಿತ್ತು. ಇದರೊಂದಿಗೆ ಹಾಲು, ಬ್ರೆಡ್, ಮೊಟ್ಟೆ ತರಕಾರಿಗಳನ್ನು ಉಚಿತವಾಗಿ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಯು.ಬಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರು, ಕೃಷ್ಣಂರಾಜು, ಖಚಾಂಚಿ, ಕೆಪಿಸಿಸಿ, ಬಿ.ಮಲ್ಲಿಕಾರ್ಜುನ್, ಚಂದ್ರಪ್ಪ, ‌ಆನಂದ್, ಮಂಜುಳಾ ಸಂಪತ್, ಬಿ.ಮೋಹನ್ ಗೋವರ್ಧನ ರೆಡ್ಡಿ, ಮುನಿರಾಜು, ವೆಂಕಟಸ್ವಾಮಿ, ಚಂದ್ರಪ್ಪ‌‌ನಗರ ಮಂಜು, ಜಿ.ಎನ್ ಆರ್ .ಬಾಬು ಇತರೆ ಮಾಜಿ ಪಾಲಿಕೆ ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರು , ವಾರ್ಡ್ ಅಧ್ಯಕ್ಷರು , ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button