
ಕಾಲಿವುಡ್ ನಟ ಯೋಗಿ ಬಾಬು ಅವರು ಇದೀಗ ಎಂ.ಎಸ್ ಧೋನಿ ಅವರ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಯೋಗಿ ಬಾಬು ಅವರಿಗೆ ಧೋನಿ ಅವರು ಸರ್ಪ್ರೈಸ್ ಗಿಫ್ಟ್‌ವೊಂದನ್ನ ನೀಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಎಂ.ಎಸ್ ಧೋನಿ ಅವರ ಚೊಚ್ಚಲ ನಿರ್ಮಾಣದ ಸಿನಿಮಾ `ಲೆಟ್ಸ್ ಗೆಟ್ ಮ್ಯಾರೀಡ್’ (Lets Get Married) ಈ ಚಿತ್ರದ ನಾಯಕ ಯೋಗಿ ಬಾಬು ಅವರಿಗೆ ಧೋನಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಎಂಎಸ್‌ಡಿ ಅವರು ತನ್ನ ಅಟೋಗ್ರಾಫ್ ಇರುವ ಬ್ಯಾಟ್‌ವೊಂದನ್ನು ಯೋಗಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋವನ್ನು ಯೋಗಿ ಬಾಬು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ. ಲೆಟ್ಸ್ ಗೆಟ್ ಮ್ಯಾರೀಡ್ `ಎಲ್‌ಜಿಎಂ’ ಎಂಬುದು ಸಿನಿಮಾ ಟೈಟಲ್‌ನ ಶಾರ್ಟ್ ಫಾರ್ಮ್. ರಮೇಶ್ ತಮಿಳ್‌ಮಣಿ ನಿರ್ದೇಶನದ ಈ ಚಿತ್ರಕ್ಕೆ ಸಾಕ್ಷಿ ಸಿಂಗ್ ಧೋನಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಯೋಗಿ ಬಾಬು ಜೊತೆಗೆ ಹರೀಶ್ ಕಲ್ಯಾಣ್, ಇವಾನ, ನದಿಯಾ ಸೇರಿದಂತೆ ದೊಡ್ಡ ತಾರಾಗಣ ಇರಲಿದೆ. ಇದೊಂದು ಫ್ಯಾಮಿಲಿ ಮನರಂಜನೆಯ ಸಿನಿಮಾವಾಗಿದೆ. ಇನ್ನೂ ಧೋನಿ ಅವರಿಗೂ ತಮಿಳುನಾಡಿಗೂ ಉತ್ತಮ ನಂಟಿದೆ. ಇದಕ್ಕೆ ಕಾರಣ ಐಪಿಎಲ್. ಧೋನಿ ಅವರು ಈ ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಕ್ರಿಕೆಟ್‌ನಿಂದ ಧೋನಿ ನಿವೃತ್ತಿ ಪಡೆದ ಬಳಿಕ ಬೇರೇ ಬೇರೇ ಸಿನಿಮಾ ಯೋಜನೆಗಳಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ವೆಬ್ ಸೀರಿಸ್ ಮತ್ತು ಮತ್ತಷ್ಟು ಸಿನಿಮಾ ಮಾಡುವ ಯೋಜನೆಯಲ್ಲಿದ್ದಾರೆ.