
ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ
ಕಳೆದ 5 ದಿನದಿಂದ ರೋಹಿಣಿ ಸಿಂಧೂರಿ ಹಾಗೂ ರೂಪಾ ಮಧ್ಯೆ ನಡೆಯುತ್ತಾ ಇದ್ದ ದೊಡ್ಡ ಪ್ರಹಸನಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ಬಡಿದಾಡಿಕೊಳ್ತಾ ಇದ್ದ ರೋಹಿಣಿ-ರೂಪಾ ಇಬ್ಬರೂ ಪರಸ್ಪರ ಮಾತನಾಡದಂತೆ ತಡೆಯಾಜ್ಞೆ ನೀಡಿದೆ. ರೋಹಿಣಿ ವಿರುದ್ಧ ರೂಪಾ ಮಾತನಾಡದಂತೆ ನಿರ್ಬಂಧ ಹೇರಿ ಕೋರ್ಟ್ ಆದೇಶ ನೀಡಿದೆ. ಶನಿವಾರ ರಾತ್ರಿ ಪ್ರಾರಂಭವಾಗಿದ್ದ ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಕಾದಾಟಕ್ಕೆ ಕೊನೆಗೆ ಬ್ರೇಕ್ ಬಿದ್ದಂತೆ ಆಗಿದೆ.
ಹೌದು, ರೂಪಾ ತನ್ನ ಫೇಸ್ ಬುಕ್ (Facebook) ಅಕೌಂಟ್ ಅಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಲಾಟೆ ಶುರುಮಾಡಿಕೊಂಡಿದ್ರು. ಈ ಪ್ರಕರಣ ಆರೋಪ ಪ್ರತ್ಯಾರೋಪದೊಂದಿಗೆ ಬರೋಬ್ಬರಿ 5 ದಿನಗಳ ಕಾಲ ಕಾದಾಟವೇ ನಡೆದುಹೋಗಿತ್ತು. ಇದನ್ನೆಲ್ಲಾ ನೋಡಿದ ಸರ್ಕಾರ ಇಬ್ಬರನ್ನು ವರ್ಗಾವಣೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
ಇಬ್ಬರು ಎಂದಿನಂತೆ ಬಡಿದಾಟ ಮುಂದುವರಿಸಿ ಕೊನೆಗೆ ರೂಪಾ ವಿರುದ್ಧ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ರು. ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದಿದ್ರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ (Court) ಕೊನೆಗೂ ರೂಪಾಗೆ ಬ್ರೇಕ್ ಹಾಕಿದ್ದು ಬಹಿರಂಗವಾಗಿ ಎಲ್ಲೂ ಮಾತನಾಡದಂತೆ ತಡೆಯಾಜ್ಞೆಯನ್ನು ನೀಡಿದೆ.