
ಟೊಯೊಟಾ ಕಂಪನಿಯು ಇನೋವಾ ಹೈಕ್ರಾಸ್ ಎಂಪಿವಿ ಬಿಡುಗಡೆಯ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಕಾರು ಇನೋವಾ ಕ್ರಿಸ್ಟಾ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಆವೃತ್ತಿಯಾಗಿದ್ದು, ಇದು ತುಸು ದುಬಾರಿ ಎನ್ನಿಸಲಿದೆ. ಹೀಗಾಗಿ ಕಂಪನಿಯು ಇನೋವಾ ಹೈಕ್ರಾಸ್ ಖರೀದಿ ಬಯಸುವ ವಾಣಿಜ್ಯ ಬಳಕೆದಾರಿಗಾಗಿ ಹೊಸ ವೆರಿಯೆಂಟ್ ಒಂದನ್ನ ಬಿಡುಗಡೆ ಮಾಡುತ್ತಿದೆ.
ಹೊಸ ಕಾರುಗಳ ಮೂಲಕ ಭಾರೀ ಸದ್ದು ಮಾಡುತ್ತಿರುವ ಟೊಯೊಟಾ ಇಂಡಿಯಾ ಕಂಪನಿ ಶೀಘ್ರದಲ್ಲಿ ಮತ್ತಷ್ಟು ಹೊಸ ಆವೃತ್ತಿಗಳನ್ನ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದ ಇನೋವಾ ಹೈಕ್ರಾಸ್ ಕಾರಿನಿಂದ ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಹೊಸ ಕಾರಿನಲ್ಲಿ ಮತ್ತೊಂದು ಬೆಸ್ ವೆರಿಯೆಂಟ್ ಅಭಿವೃದ್ದಿಪಡಿಸುತ್ತಿದೆ.
ಇನೋವಾ ಎಂಪಿವಿ ಮೂಲಕ ಹಲವಾರು ದಾಖಲೆಗಳನ್ನ ನಿರ್ಮಿಸಿರುವ ಟೊಯೊಟಾ ಕಂಪನಿ ಇದೀಗ ಹೈಕ್ರಾಸ್ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಇನೋವಾ ಹೈಕ್ರಾಸ್ ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಶೀಘ್ರದಲ್ಲಿಯೇ ವಾಣಿಜ್ಯ ಬಳಕೆದಾರಿಗಾಗಿ ಹೊಸ ವೆರಿಯೆಂಟ್ ಪಡೆದುಕೊಳ್ಳಲಿದೆ. ಹೊಸ ವೆರಿಯೆಂಟ್ ಸದ್ಯ ಮಾರುಕಟ್ಟೆಯಲ್ಲಿ ಜಿ ವೆರಿಯೆಂಟ್ ಗಿಂತಲೂ ಕೆಳ ದರ್ಜೆಯಲ್ಲಿ ಮಾರಾಟವಾಗಲಿದ್ದು, ಇದು ಬೆಲೆಯಲ್ಲೂ ಗಮನಸೆಳೆಯಲಿದೆ.
ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಟೊಯೊಟಾ ಕಂಪನಿ ಸದ್ಯ G,GX,VX ಮತ್ತು ZX ವೆರಿಯೆಂಟ್ ಗಳನ್ನ ಮಾರಾಟ ಮಾಡುತ್ತಿದೆ. ಆದರೆ ಬಿಡುಗಡೆಯಾಗಲಿರುವ ಹೊಸ ವೆರಿಯೆಂಟ್ ಜಿ ವೆರಿಯೆಂಟ್ ಗಿಂತಲೂ ಕೆಲವು ಕಡಿಮೆ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೊಸ ವೆರಿಯೆಂಟ್ ವಿಶೇಷವಾಗಿ ಫ್ಲಿಟ್ ಆರ್ಪರೇಟರ್ಸ್ ಗಳಿಗಾಗಿ ಮಾರಾಟ ಮಾಡಲಿದ್ದು, ಇವು ಗ್ರಾಹಕರಿಗೆ ಹೊಸ ಚಾಲನಾ ಅನುಭವ ನೀಡಲಿವೆ. ಜೊತೆಗೆ ಹೊಸ ವೆರಿಯೆಂಟ್ ಪೆಟ್ರೋಲ್ ಜೊತೆಗೆ ಸಿಎನ್ ಜಿ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಾಗುತ್ತಿದ್ದು, ಇವು ಸಾಮಾನ್ಯ ಮಾದರಿಯಲ್ಲಿರುವಂತೆ ಹೆಚ್ಚಿನ ಪರ್ಫಾಮೆನ್ಸ್ ಹೊಂದಿಲ್ಲವಾದರೂ ಉತ್ತಮ ಇಂಧನ ದಕ್ಷತೆ ಹೊಂದಿರಲಿವೆ.
ಫ್ಲಿಟ್ ಆಪರೇಟರ್ಸ್ ಗಳಿಗೆ ಹೊಸ ಕಾರು ಮಾದರಿಗಳಿಂದ ಹೆಚ್ಚನ ಲಾಭಾಂಶ ದೊರೆಯಲಿದ್ದು, ಹೊಸ ಆವೃತ್ತಿಗಳು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಹೊಸ ವೆರಿಯೆಂಟ್ ಗಳ ಬೆಲೆ ಸಾಮಾನ್ಯ ಮಾದರಿಗಳಿಂತ ರೂ. 1 ಲಕ್ಷದಷ್ಟು ಕಡಿಮೆ ಬೆಲೆಗೆ ದೊರೆಯಲಿದ್ದು, ಇದರಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಗಳನ್ನ ತೆಗೆದುಹಾಕಲಾಗಿದೆ. ಸದ್ಯ ಖರೀದಿಗೆ ಲಭ್ಯವಿರುವ ಇನೋವಾ ಹೈಕ್ರಾಸ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 18.30 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೈ ಎಂಡ್ ಮಾದರಿಯು ಪೆಟ್ರೋಲ್ ಹೈಬ್ರಿಡ್ ಎಂಜಿನ್ ನೊಂದಿಗೆ ರೂ. 28.97 ಲಕ್ಷ ಬೆಲೆ ಹೊಂದಿದೆ. ಹೀಗಾಗಿ ವಾಣಿಜ್ಯ ಬಳಕೆದಾರಿಗಾಗಿ ಬೆಸ್ ವೆರಿಯೆಂಟ್ ಆಧರಿಸಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ವೆರಿಯೆಂಟ್ ಟೊಯೊಟಾ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.
ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಹೈಕ್ರಾಸ್ ಕಾರು ಮಾದರಿಯು 2.0 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 16.13 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ಮಾದರಿಯು 23 ಕಿ.ಮೀ ಮೈಲೇಜ್ ನೀಡುತ್ತದೆ. ಇದರಲ್ಲಿ ಸದ್ಯಕ್ಕೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮಾತ್ರ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಬೆಸ್ ವೆರಿಯೆಂಟ್ ನಲ್ಲಿ ಮ್ಯಾನುವಲ್ ಆವೃತ್ತಿಯನ್ನ ಪರಿಚಯಿಸಬಹುದಾಗಿದೆ. ಹೀಗಾಗಿ ಹೊಸ ವೆರಿಯೆಂಟ್ ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿಲಿದ್ದು, ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ 23 ರಿಂದ 25 ಕಿ.ಮೀ ಮೈಲೇಜ್ ನೀಡಬಹುದಾಗಿದೆ.